alex Certify ಅಂಬಾನಿ ನಿವಾಸದ ಬಳಿ ಸ್ಫೋಟಕ ಇಟ್ಟ ಪ್ರಕರಣ: ಮಹತ್ವದ ಮಾಹಿತಿ ಬಿಚ್ಚಿಟ್ಟ ಎನ್‌ಐಎ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಬಾನಿ ನಿವಾಸದ ಬಳಿ ಸ್ಫೋಟಕ ಇಟ್ಟ ಪ್ರಕರಣ: ಮಹತ್ವದ ಮಾಹಿತಿ ಬಿಚ್ಚಿಟ್ಟ ಎನ್‌ಐಎ

ಅಂಟಿಲಿಯಾ ಬಾಂಬ್​ ಬೆದರಿಕೆ ಪ್ರಕರಣ ಸಂಬಂಧ ಬಂಧಿತರಾಗಿದ್ದ ಮುಂಬೈನ ವಜಾಗೊಂಡ ಪೊಲೀಸ್​ ಅಧಿಕಾರಿ ಸಚಿನ್​ ವಾಜೆ ತಮ್ಮ ಸೂಪರ್​ ಕಾಪ್​ ಖ್ಯಾತಿಯನ್ನು ಮರಳಿ ಪಡೆಯಲು ಯತ್ನಿಸಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತನ್ನ ಚಾರ್ಜ್​ಶೀಟ್​ನಲ್ಲಿ ಹೇಳಿದೆ.

ಎನ್​ಐಎ ಚಾರ್ಜ್​ಶೀಟ್​ನಲ್ಲಿರುವ ಮಾಹಿತಿಯ ಪ್ರಕಾರ, ಬಂಧನಕ್ಕೂ ಮುನ್ನ ಮುಂಬೈನ ಕ್ರೈಂ ಬ್ರ್ಯಾಂಚ್​ನಲ್ಲಿ ಎಎಸ್​ಐ ಆಗಿದ್ದ ಸಚಿನ್​ ವಾಜೆ ಫೆಬ್ರವರಿ 25ರಂದು ಅಂಬಾನಿ ನಿವಾಸದ ಎದುರು ಸ್ಪೋಟಕಗಳಿಂದ್ದ ಎಸ್​ಯುವಿಯನ್ನು ತಂದು ನಿಲ್ಲಿಸುವಲ್ಲಿ ಆರೋಪಿಗಳ ಜೊತೆ ಕೈ ಜೋಡಿಸಿದ್ದರು ಎಂದು ಹೇಳಿದೆ.

ಶ್ರೀಮಂತ ವ್ಯಕ್ತಿಗಳಿಗೆ ಬೆದರಿಕೆಯೊಡ್ಡುವ ಉದ್ದೇಶವು ಇಲ್ಲಿ ಸ್ಪಷ್ಟವಾಗಿತ್ತು. ಅಲ್ಲದೇ ಅವರಿಂದ ಹಣ ಸುಲಿಗೆ ಮಾಡುವ ಗುರಿ ಕೂಡ ಇತ್ತು ಎಂದು ಚಾರ್ಜ್​ಶೀಟ್​ನಲ್ಲಿ ಹೇಳಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಇದಕ್ಕೆ ಜೈಶ್​ ಉಲ್​ ಹಿಂದ್​ ಹೆಸರಿಗೂ ನಂಟು ಮಾಡಲಾಗಿತ್ತು.

ಬೆದರಿಕೆ ನೋಟ್​ನಲ್ಲಿ ಮುಂದಿನ ಬಾರಿ ಬಾಂಬ್​ಗಳು ಕನೆಕ್ಟ್ ಆಗಿ ಇರಲಿದೆ ಎಂದು ಹೇಳಲಾಗಿತ್ತು. ಈ ರೀತಿ ಸುಳ್ಳು ಪ್ರಕರಣದ ಮೂಲಕ ತಮ್ಮ ಹಾಳಾಗಿದ್ದ ಪ್ರತಿಷ್ಠೆಯನ್ನು ಪುನಃ ಪಡೆಯಲು ವಾಝೆ ಪ್ಲಾನ್​ ಮಾಡಿದ್ದರು ಎನ್ನಲಾಗಿದೆ.

ಎನ್​ಐಎ ಚಾರ್ಜ್​ಶೀಟ್​ನ ಪ್ರಕಾರ, ವಾಝೆ ಎಸ್​ಯುವಿ ಕಾರನ್ನು ಅಂಬಾನಿ ನಿವಾಸದ ಎದುರು ನಿಲ್ಲಿಸಿ ಬೆದರಿಕೆ ಪತ್ರವನ್ನೂ ಇಟ್ಟಿದ್ದರು ಎಂದು ಹೇಳಿದೆ.

ಮೊದಲು ಈ ಪ್ರಕರಣವನ್ನು ವಾಝೆ ಕೈಗೆತ್ತಿಕೊಂಡಿದ್ದರು. ಟೆಲಿಗ್ರಾಂ ಚಾನೆಲ್​ನ ಮೂಲಕ ಈ ಪ್ರಕರಣಕ್ಕೆ ಭಯೋತ್ಪಾದನೆಯ ಬಣ್ಣ ಬಳಿಯಲು ಯತ್ನಿಸಿದ್ದರು. ಆದರೆ ಎಸ್​ಯುವಿ ಮಾಲೀಕ ಹಿರೇನ್​ ಸಾವಿನ ಬಳಿಕ ವಾಝೆ ಪ್ಲಾನ್​ ಒಂದೊಂದಾಗಿ ಬೆಳಕಿಗೆ ಬಂದಿದೆ.

ಪತಿಯ ಅನುಮಾನಾಸ್ಪದ ಸಾವಿನಲ್ಲಿ ವಾಝೆ ಪಾತ್ರವಿದೆ ಎಂದು ಹಿರೇನ್​ ಪತ್ನಿ ಅನುಮಾನ ವ್ಯಕ್ತಪಡಿಸಿ ಬಳಿಕ ಪ್ರಕರಣ ರೋಚಕ ತಿರುವು ಪಡೆದುಕೊಂಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...