ಹಿಂದೂ ಧರ್ಮದಲ್ಲಿ ಮಂಗಳಸೂತ್ರವನ್ನು ಪವಿತ್ರ ಆಭರಣ ಎಂದು ಕರೆಯಲಾಗುತ್ತೆ. ಆದರೆ ಇದೇ ಮಂಗಳಸೂತ್ರ ಜಾಹೀರಾತಿನ ವಿಚಾರವಾಗಿ ಡಿಸೈನರ್ ಮುಖರ್ಜಿ ಸೋಶಿಯಲ್ ಮೀಡಿಯಾದಲ್ಲಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಂಟಿಮೇಟ್ ಫೈನ್ ಜ್ಯುವೆಲ್ಲರಿ ಎಂದು ಈ ಹೊಸ ಕಲೆಕ್ಷನ್ಗೆ ಹೆಸರಿಡಲಾಗಿದೆ.
ಸಭ್ಯಸಾಚಿಯು ಹೊಸದಾಗಿ ಅನಾವರಣಗೊಳಿಸಿರುವ ಮಂಗಳಸೂತ್ರ ಆಭರಣಗಳನ್ನು ಧರಿಸುವ ಮಾಡೆಲ್ಗಳ ಫೋಟೋವನ್ನು ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಬ್ಯಸಾಚಿ ಪೋಸ್ಟ್ ಮಾಡಿದೆ.
ಪ್ರಚಾರದ ಜಾಹೀರಾತಿನಲ್ಲಿ ಭಿನ್ನಲಿಂಗೀಯ ಹಾಗೂ ಸಲಿಂಗಕಾಮಿ ದಂಪತಿ ರಾಯಲ್ ಬಂಗಾಳದ ಮಂಗಳಸೂತ್ರವನ್ನು ಧರಿಸಿ ಫೋಟೋಗೆ ಪೋಸ್ ನೀಡಿದ್ದಾರೆ. ಎದೆಯೆಲ್ಲ ಕಾಣುವಂತಹ ಧಿರಿಸನ್ನು ಧರಿಸಿ ಮಾಡೆಲ್ಗಳು ಮಂಗಳ ಸೂತ್ರ ಹಾಕಿದ್ದಾರೆ.
ಆದರೆ ಸಬ್ಯಸಾಚಿಯ ಈ ಜಾಹೀರಾತಿಗೆ ಇಂಟರ್ನೆಟ್ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ರೀತಿ ಮೈ ಮಾಟ ಕಾಣುವಂತಹ ಬಟ್ಟೆ ಧರಿಸಿದ ಮಹಿಳೆಯರ ಬಳಿ ಮಂಗಳಸೂತ್ರದ ಜಾಹೀರಾತು ನೀಡಿರೋದು ಹಿಂದೂ ಧರ್ಮಕ್ಕೆ ಮಾಡಿದ ಅಪಮಾನವಾಗಿದೆ ಎಂದು ಕಿಡಿಕಾರಿದ್ದಾರೆ.
ನೀವು ಈ ಜಾಹೀರಾತಿನ ಮೂಲಕ ಏನನ್ನು ಪ್ರಚಾರ ಮಾಡಲು ಬಯಸುತ್ತಿದ್ದೀರಿ..? ಈ ಆಭರಣವನ್ನು ಧರಿಸಲು ಇಷ್ಟು ಕೆಳಹಂತಕ್ಕೆ ಇಳಿಯಬೇಕು ಅಂದರೆ ಇದನ್ನು ಧರಿಸಲು ಯಾರೂ ಮುಂದೆ ಬರೋದಿಲ್ಲ. ನಿಮ್ಮ ಕ್ಯಾಂಪೇನ್ಗಳ ಬಗ್ಗೆ ಎಚ್ಚರಿಕೆ ವಹಿಸಿ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
ಆಭರಣಗಳು ಕಲೆಯ ಸುಂದರ ಭಾಗವಾಗಿದೆ. ಇದನ್ನು ನೀವು ಒಳ್ಳೆಯ ಮಾರ್ಗದ ಮೂಲಕವೇ ಪ್ರಚಾರ ಮಾಡಬಹುದಿತ್ತು ಎಂಬ ಅಭಿಪ್ರಾಯಗಳು ಕೂಡ ವ್ಯಕ್ತವಾಗಿದೆ.
ಮಂಗಳಸೂತ್ರವನ್ನು ಈ ರೀತಿಯಲ್ಲಿ ಪ್ರಚಾರ ಮಾಡುವ ನಿಮಗೆ ಬುರ್ಕಾ ಹಾಗೂ ತಬಿಜ್ನ್ನೂ ಇದೇ ರೀತಿ ಜಾಹೀರಾತನ್ನು ಪ್ರಕಟಿಸಿ ಮಾರಾಟ ಮಾಡುವ ಧೈರ್ಯ ನಿಮಗಿದೆಯೇ ಎಂದು ನೆಟ್ಟಿಗರೊಬ್ಬರು ಸವಾಲ್ ಎಸೆದಿದ್ದಾರೆ.