alex Certify ಧರ್ಮೇಗೌಡರದು ರಾಜಕೀಯ ಕೊಲೆ: ಸ್ನೇಹಿತನ ಅಗಲಿಕೆಗೆ ಬಿಕ್ಕಿ ಬಿಕ್ಕಿ ಅತ್ತ ಕುಮಾರಸ್ವಾಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧರ್ಮೇಗೌಡರದು ರಾಜಕೀಯ ಕೊಲೆ: ಸ್ನೇಹಿತನ ಅಗಲಿಕೆಗೆ ಬಿಕ್ಕಿ ಬಿಕ್ಕಿ ಅತ್ತ ಕುಮಾರಸ್ವಾಮಿ

ಬೆಂಗಳೂರು: ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಅವರದು ಆತ್ಮಹತ್ಯೆಯಲ್ಲ, ರಾಜಕೀಯ ಕೊಲೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಅಳುತ್ತಲೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ರಾಜಕಾರಣದ ಕೊಲೆ ಎಂದು ಹೇಳಲು ಬಯಸುತ್ತೇನೆ. ನಮ್ಮಂತಹ ರಾಜಕಾರಣಿಗಳಿಂದ ಇಂತಹ ಸೂಕ್ಷ್ಮ ಮನಸ್ಸಿನವರು ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಧರ್ಮೇಗೌಡರ ತಂದೆ ಲಕ್ಷ್ಮಯ್ಯ ನನಗೆ ಒಂದು ಮಾತು ಹೇಳಿದ್ದರು. ನಾನಂತೂ ಮಂತ್ರಿಯಾಗಲು ಆಗಲಿಲ್ಲ. ನಾನು ಬದುಕಿರುವಾಗಲೇ ನನ್ನ ಪುತ್ರ ಮಂತ್ರಿ ಆಗಬೇಕು ಎಂದು ಹೇಳಿದ್ದರು. ಅವರ ಆಸೆ ಈಡೇರಿಸಲು ಆಗಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

ನನ್ನ ಸ್ನೇಹಿತ ಇಂದು ನನ್ನನ್ನು ಆಗಿದ್ದಾನೆ. ಧರ್ಮೇಗೌಡರು ಒಳ್ಳೆಯ ವ್ಯಕ್ತಿಯಾಗಿದ್ದರು. ಇಂತಹ ಘಟನೆ ಸಹಿಸಲು ಆಗುವುದಿಲ್ಲ. ಇದು ಆತ್ಮಹತ್ಯೆಯಲ್ಲ, ರಾಜಕೀಯ ಕೊಲೆ ಎಂದು ಪುನರುಚ್ಚರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...