alex Certify ದುರಸ್ತಿ ಹಂತ ತಲುಪಿದೆ ವಿಶ್ವ ಪ್ರಸಿದ್ಧ ‘ಐಫೆಲ್​ ಟವರ್’​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುರಸ್ತಿ ಹಂತ ತಲುಪಿದೆ ವಿಶ್ವ ಪ್ರಸಿದ್ಧ ‘ಐಫೆಲ್​ ಟವರ್’​

ಪ್ಯಾರಿಸ್​ನ ವಿಶ್ವ ವಿಖ್ಯಾತ ಐಫೆಲ್​​ ಟವರ್​​ ತುಕ್ಕು ಹಿಡಿದಿದ್ದು ಸಂಪೂರ್ಣ ರಿಪೇರಿಯ ಅಗತ್ಯವಿದೆ. ಪ್ಯಾರಿಸ್​ನಲ್ಲಿ 2024ರ ಒಲಿಂಪಿಕ್​ ಗೇಮ್ಸ್​ಗೆ ಮುಂಚಿತವಾಗಿ ಕಾಸ್ಮೆಟಿಕ್​​ 60 ಮಿಲಿಯನ್​ ಯುರೋ ಪೇಂಟ್​​ ಕೆಲಸವನ್ನು ನೀಡಲಾಗುತ್ತಿದೆ ಎಂದು ಗುಪ್ತ ಮೂಲಗಳು ಮಾಹಿತಿ ನೀಡಿವೆ.

19ನೇ ಶತಮಾನದ ಉತ್ತರಾರ್ಧದಲ್ಲಿ ಗುಸ್ಟಾವ್​ ಐಫೆಲ್​ ನಿರ್ಮಿಸಿದರು. ಕಬ್ಬಿಣದ ಈ ಟವರ್​ 324 ಮೀಟರ್​​ ಎತ್ತರವನ್ನು ಹೊಂದಿದೆ. ವಿಶ್ವದಲ್ಲಿ ಅತೀ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಪ್ರವಾಸಿ ತಾಣಗಳಲ್ಲಿ ಇದು ಒಂದಾಗಿದೆ. ಪ್ರತಿ ವರ್ಷ ಆರು ಮಿಲಿಯನ್​ ಪ್ರವಾಸಿಗರು ಐಫೆಲ್​ ಟವರ್​ಗೆ ಭೇಟಿ ನೀಡುತ್ತಾರೆ.

ಆದರೆ ಗುಪ್ತ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಈ ಐಕಾನಿಕ್​ ಐಫೆಲ್​ ಟವರ್​​ ದುಃಸ್ಥಿತಿಯನ್ನು ತಲುಪಿದೆ. ಟವರ್​ಗೆ ತುಕ್ಕು ಹಿಡಿದಿದೆ ಎಂದು ತಿಳಿದುಬಂದಿದೆ.

ಗುಸ್ಟಾವ್​​ ಏನಾದರೂ ಈ ಸ್ಥಳಕ್ಕೆ ಭೇಟಿ ನೀಡುತ್ತಿದ್ದರೆ ಅವರಿಗೆ ಐಫೆಲ್​​ ಟವರ್ ನೋಡಿ ಹೃದಯಾಘಾತವಾಗುತ್ತಿತ್ತು ಎಂದು ಆಡಳಿತ ಮಂಡಳಿಯ ಮ್ಯಾನೇಜರ್​ ಒಬ್ಬರು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...