ಪ್ಯಾರಿಸ್ನ ವಿಶ್ವ ವಿಖ್ಯಾತ ಐಫೆಲ್ ಟವರ್ ತುಕ್ಕು ಹಿಡಿದಿದ್ದು ಸಂಪೂರ್ಣ ರಿಪೇರಿಯ ಅಗತ್ಯವಿದೆ. ಪ್ಯಾರಿಸ್ನಲ್ಲಿ 2024ರ ಒಲಿಂಪಿಕ್ ಗೇಮ್ಸ್ಗೆ ಮುಂಚಿತವಾಗಿ ಕಾಸ್ಮೆಟಿಕ್ 60 ಮಿಲಿಯನ್ ಯುರೋ ಪೇಂಟ್ ಕೆಲಸವನ್ನು ನೀಡಲಾಗುತ್ತಿದೆ ಎಂದು ಗುಪ್ತ ಮೂಲಗಳು ಮಾಹಿತಿ ನೀಡಿವೆ.
19ನೇ ಶತಮಾನದ ಉತ್ತರಾರ್ಧದಲ್ಲಿ ಗುಸ್ಟಾವ್ ಐಫೆಲ್ ನಿರ್ಮಿಸಿದರು. ಕಬ್ಬಿಣದ ಈ ಟವರ್ 324 ಮೀಟರ್ ಎತ್ತರವನ್ನು ಹೊಂದಿದೆ. ವಿಶ್ವದಲ್ಲಿ ಅತೀ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಪ್ರವಾಸಿ ತಾಣಗಳಲ್ಲಿ ಇದು ಒಂದಾಗಿದೆ. ಪ್ರತಿ ವರ್ಷ ಆರು ಮಿಲಿಯನ್ ಪ್ರವಾಸಿಗರು ಐಫೆಲ್ ಟವರ್ಗೆ ಭೇಟಿ ನೀಡುತ್ತಾರೆ.
ಆದರೆ ಗುಪ್ತ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಈ ಐಕಾನಿಕ್ ಐಫೆಲ್ ಟವರ್ ದುಃಸ್ಥಿತಿಯನ್ನು ತಲುಪಿದೆ. ಟವರ್ಗೆ ತುಕ್ಕು ಹಿಡಿದಿದೆ ಎಂದು ತಿಳಿದುಬಂದಿದೆ.
ಗುಸ್ಟಾವ್ ಏನಾದರೂ ಈ ಸ್ಥಳಕ್ಕೆ ಭೇಟಿ ನೀಡುತ್ತಿದ್ದರೆ ಅವರಿಗೆ ಐಫೆಲ್ ಟವರ್ ನೋಡಿ ಹೃದಯಾಘಾತವಾಗುತ್ತಿತ್ತು ಎಂದು ಆಡಳಿತ ಮಂಡಳಿಯ ಮ್ಯಾನೇಜರ್ ಒಬ್ಬರು ಮಾಹಿತಿ ನೀಡಿದ್ದಾರೆ.