ನವದೆಹಲಿ: ಭಾರತದ ಕೆಲವು ಖಾಸಗಿ ಆಸ್ಪತ್ರೆಗಳು ರಷ್ಯಾದ ಸ್ಪುಟ್ನಿಕ್- ವಿ ಲಸಿಕೆಯ ಆರ್ಡರ್‌ಗಳನ್ನು ರದ್ದುಗೊಳಿಸಿವೆ.
ಕೆಲವು ಉದ್ಯಮದ ಅಧಿಕಾರಿಗಳು ಹೇಳುವಂತೆ, ರಷ್ಯಾದ ಕೋವಿಡ್-19 ಲಸಿಕೆಗೆ ಕಡಿಮೆ ಬೇಡಿಕೆ ಮತ್ತು ಅತ್ಯಂತ ತಣ್ಣನೆಯ ತಾಪಮಾನ ಶೇಖರಣೆ ಮಾಡಬೇಕಾದುದರಿಂದ ಕನಿಷ್ಠ ಮೂರು ದೊಡ್ಡ ಆಸ್ಪತ್ರೆಗಳು ಸ್ಪುಟ್ನಿಕ್-ವಿ ಆರ್ಡರ್‌ಗಳನ್ನು ರದ್ದುಗೊಳಿಸಿದೆ.
Expiry ಡೇಟ್ ಮಾತ್ರವಲ್ಲ ಔಷಧಿ – ಮಾತ್ರೆ ಖರೀದಿಸುವಾಗ ಇದನ್ನೂ ಚೆಕ್ ಮಾಡಿ
ಇದನ್ನು ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕರಲ್ಲಿ ಖಾಸಗಿ ಮಾರುಕಟ್ಟೆಯಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ.
“ಸಂಗ್ರಹಣೆ ದೃಷ್ಟಿಯಿಂದ ನಾವು 2,500 ಡೋಸ್‌ಗಳಿಗಾಗಿ ನೀಡಿದ್ದ ಸ್ಪುಟ್ನಿಕ್ ಲಸಿಕೆ ಆರ್ಡರ್ ಅನ್ನು ರದ್ದುಗೊಳಿಸಿದ್ದೇವೆ” ಎಂದು ಪಶ್ಚಿಮ ನಗರ ಪುಣೆಯ ಭಾರತಿ ವಿದ್ಯಾಪೀಠ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹಿರಿಯ ವೈದ್ಯಕೀಯ ಅಧಿಕಾರಿ ಜಿತೇಂದ್ರ ಓಸ್ವಾಲ್ ಹೇಳಿದ್ದಾರೆ. “ಅಲ್ಲದೆ ಈ ಲಸಿಕೆಗೆ ಬೇಡಿಕೆಯೂ ಉತ್ತಮವಾಗಿಲ್ಲ. ಕೇವಲ 1%ನಷ್ಟು ಜನರು ಮಾತ್ರ ಈ ಲಸಿಕೆ ತೆಗೆದುಕೊಳ್ಳಲು ಬಯಸಿದ್ದಾರೆ” ಎಂದು ಅವರು ಹೇಳಿದ್ದಾರೆ.