ಎಂಜಿನ್ ಹಾಳಾಗಿ ಅಪಘಾತಕ್ಕೀಡಾಗುತ್ತಿದ್ದ ವಿಮಾನದಿಂದ ಪೈಲೆಟ್ ಒಬ್ಬರು ಜಿಗಿದು ಪ್ರಾಣ ಉಳಿಸಿಕೊಂಡಿರುವ ವಿಡಿಯೋ ಒಂದು ವೈರಲ್ ಆಗಿದೆ. ಪೈಲೆಟ್ ಧರಿಸಿದ್ದ ಹೆಲ್ಮೆಟ್ನಲ್ಲಿದ್ದ ಕ್ಯಾಮೆರಾದಲ್ಲಿ ಈ ಭಯಾನಕ ಘಟನೆ ಸೆರೆಯಾಗಿದೆ.
ರಷ್ಯಾದ ಫೈಟರ್ ಪೈಲೆಟ್ ಈ ರೀತಿ ಜೀವ ಉಳಿಸಿಕೊಂಡಿದ್ದಾರೆ. ಅವರು ಚಲಾಯಿಸುತ್ತಿದ್ದ ಸುಖೋಯ್ -25 ಎಂಜಿನ್ ಹಾಳಾಗಿ ವಿಮಾನವು ಇನ್ನೇನು ಪತನವಾಗಲಿದೆ ಎಂದಾಗ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಹಾನಿಗೊಳಗಾದ ಸುಖೋಯ್-25 ತೆರೆದ ಭೂಪ್ರದೇಶದ ಮೇಲೆ ಹಾರಾಟ ನಡೆಸುವುದು ಕಷ್ಟ ಎಂದು ತಿಳಿದಾಗ ಪರಿಸ್ಥಿತಿಯನ್ನು ನಿಭಾಯಿಸಲು ಅವರು ಹೊರಕ್ಕೆ ಹಾರಿದ್ದಾರೆ.
ಪೈಲೆಟ್ ಇಲ್ಲದ ವಿಮಾನ ಸುಮಾರು ಒಂದು ಕಿಲೋಮೀಟರ್ ದೂರ ಹಾರಿ ನಂತರ ಹಸಿರು ಮೈದಾನವೊಂದಕ್ಕೆ ಅಪ್ಪಳಿಸಿ ಸ್ಫೋಟಗೊಂಡಿದೆ. ಈ ತುಣುಕನ್ನು ಯೂಟ್ಯೂಬ್ನಲ್ಲಿ ವಾರ್ಲೀಕ್ಸ್ ಎಂಬ ಮಿಲಿಟರಿ ಸಾಕ್ಷ್ಯಚಿತ್ರ ಚಾನೆಲ್ ಪ್ರಕಟಿಸಿದೆ. ನಂಬಲಸಾಧ್ಯ ರೀತಿಯಲ್ಲಿ ಪೈಲೆಟ್ ಜೀವ ಉಳಿಸಿಕೊಂಡಿರುವುದಾಗಿ ಇದರಲ್ಲಿ ವಿವರಿಸಲಾಗಿದೆ.