ಉಕ್ರೇನ್ ಮೇಲೆ ರಷ್ಯಾ, ಯುದ್ಧ ಘೋಷಣೆ ಮಾಡಿ ಒಂಭತ್ತು ದಿನಗಳಾಗಿವೆ. ಈಗಲೂ ರಷ್ಯಾ ಉಕ್ರೇನ್ ಮೇಲಿನ ದಾಳಿಯನ್ನು ಮುಂದುವರೆಸಿದೆ. ರಷ್ಯಾದ ದಾಳಿಯಿಂದ ತತ್ತರಿಸಿರುವ ಕೋಟ್ಯಾಂತರ ನಾಗರಿಕರು ತಮ್ಮ ಜೀವವನ್ನು ಕೈಯ್ಯಲ್ಲಿಟ್ಟುಕೊಂಡು, ಒಂದೊಂದು ಕ್ಷಣ ಕಳೆಯುತ್ತಿದ್ದಾರೆ. ರಷ್ಯಾದ ದಾಳಿಯಿಂದ ಕೇವಲ ಉಕ್ರೇನ್ ಮಾತ್ರವಲ್ಲ ಇತರ ರಾಷ್ಟ್ರಗಳಿಗು ತೊಂದರೆ ತಪ್ಪಿದಲ್ಲ ಎಂದು ಮೊದಲಿಂದಲೂ ಹೇಳಲಾಗುತ್ತಿತ್ತು, ಅದು ಈಗ ನಿಜವಾಗಿದೆ.
ಹೌದು, ರಷ್ಯಾ ಸೇನೆಯು ಉಕ್ರೇನ್‌ನಲ್ಲಿರುವ, ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರ ಜಪೋರಿಝಿಯಾವನ್ನು ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ. ರಷ್ಯಾ, ಇಂದು ನಡೆಸಿದ ಶೆಲ್ ದಾಳಿಯಿಂದ ಸ್ಥಾವರದ ಸೈಟ್ನಲ್ಲಿ ದೊಡ್ಡ ಪ್ರಮಾಣದ ಬೆಂಕಿ ಉಂಟಾಗಿದೆ, ಅದಾದ ಕೆಲವು ಗಂಟೆಗಳ ನಂತರ ಈ ಸುದ್ದಿ ಬಂದಿದೆ.
ಪೊಲೀಸ್ ಇಲಾಖೆಯಲ್ಲಿ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ ʼಮಹಾʼ ಸರ್ಕಾರ….!
ಉಕ್ರೇನ್‌ನಲ್ಲಿರುವ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರವು ಯುರೋಪಿನಲ್ಲೇ ಅತ್ಯಂತ ದೊಡ್ಡ ವಿದ್ಯುತ್ ಸ್ಥಾವರ. ಉಕ್ರೇನ್‌ನಲ್ಲಿ ರಷ್ಯಾದ ಸೈನಿಕರು ಶೆಲ್ ದಾಳಿ ನಡೆಸಿದ ನಂತರ, ಶುಕ್ರವಾರ ಮುಂಜಾನೆ ಈ ವಿದ್ಯುತ್ ಸ್ಥಾವರದಲ್ಲೂ ಬೆಂಕಿ ಹೊತ್ತಿಕೊಂಡಿದೆ. ಈ ಬಗ್ಗೆ ಜಪೋರಿಝಿಯಾ ಸ್ಥಾವರ ಪ್ರದೇಶಕ್ಕೆ ಹತ್ತಿರದಲ್ಲಿರುವ ಪಟ್ಟಣ, ಎನರ್‌ಗೋಡರ್‌ನ ಮಾಹಿತಿ ನೀಡಿದ್ದಾರೆ.