ಉಕ್ರೇನ್‌ನಲ್ಲಿನ ಯುದ್ಧದಿಂದ ಸ್ಥಳಾಂತರಗೊಂಡ ಮಕ್ಕಳಿಗೆ ಸಹಾಯ ಮಾಡಲು ದಾಖಲೆಯ $ 103.5 ಮಿಲಿಯನ್‌ಗೆ ತನ್ನ ನೊಬೆಲ್ ಪದಕ ಹರಾಜು ಹಾಕಿದ ರಷ್ಯಾ ವ್ಯಕ್ತಿ ವಿಶ್ವದ ಗಮನ ಸೆಳೆದಿದ್ದಾರೆ.
2021 ರ ನೊಬೆಲ್ ಶಾಂತಿ ಪ್ರಶಸ್ತಿಯ ಸಹ ವಿಜೇತ ಮತ್ತು ರಷ್ಯಾದ ಪತ್ರಿಕೆ ಸಂಪಾದಕ ಡಿಮಿಟ್ರಿ ಮುರಾಟೋವ್ ಅವರು ಉಕ್ರೇನ್‌ನಲ್ಲಿನ ಯುದ್ಧದಿಂದ ಸ್ಥಳಾಂತರಗೊಂಡ ಮಕ್ಕಳಿಗೆ ಸಹಾಯ ಮಾಡಲು ತನ್ನ ನೊಬೆಲ್ ಪದಕವನ್ನು ಹರಾಜು ಹಾಕಿದರು.
ವಿಶ್ವ ನಿರಾಶ್ರಿತರ ದಿನದಂದು ನಡೆದ ಹರಾಜಿನಲ್ಲಿ ಬರುವ ಎಲ್ಲಾ ಆದಾಯವು ಉಕ್ರೇನ್‌ನ ಸ್ಥಳಾಂತರಗೊಂಡ ಮಕ್ಕಳಿಗಾಗಿ ಯುನಿಸೆಫ್‌ನ ಮೂಲಕ ನೀಡಲಾಗುತ್ತದೆ ಎಂದು ನ್ಯೂಯಾರ್ಕ್‌ನಲ್ಲಿ ಹೆರಿಟೇಜ್ ಆಕ್ಷನ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಒಮ್ಮೆ ಠೇವಣಿ ಇರಿಸಿ ಪ್ರತಿ ತಿಂಗಳು ಸ್ಥಿರ ಆದಾಯ ಪಡೆಯಿರಿ
ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅವರ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ ಮುರಾಟೋವ್ ಅವರ ನೊವಾಯಾ ಗೆಜೆಟಾ ಪತ್ರಿಕೆ, ಉಕ್ರೇನ್‌ನಲ್ಲಿನ ಯುದ್ಧದ ಕುರಿತು ಎಚ್ಚರಿಕೆ ನೀಡಿದ ನಂತರ ಮಾರ್ಚ್‌ನಲ್ಲಿ ರಷ್ಯಾದಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು.
ಮಾಸ್ಕೋ ಫೆಬ್ರವರಿ 24ರಂದು ಉಕ್ರೇನ್‌ಗೆ ಸೈನ್ಯವನ್ನು ಕಳುಹಿಸಿದ ನಂತರ ಸರ್ಕಾರದ ವಿರುದ್ಧ ಪತ್ರಿಕೆಯು ತನ್ನ ಅಸಮಾಧಾನ ಹೊರಹಾಕಿತ್ತು.