alex Certify ಒಮ್ಮೆ ಠೇವಣಿ ಇರಿಸಿ ಪ್ರತಿ ತಿಂಗಳು ಸ್ಥಿರ ಆದಾಯ ಪಡೆಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಮ್ಮೆ ಠೇವಣಿ ಇರಿಸಿ ಪ್ರತಿ ತಿಂಗಳು ಸ್ಥಿರ ಆದಾಯ ಪಡೆಯಿರಿ

ಮಾಸಿಕ ಆದಾಯ, ಸುರಕ್ಷಿತ ಹೂಡಿಕೆ ಬಗ್ಗೆ ಇಂದು ಜನರು ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. ದೀರ್ಘಾವಧಿಯಲ್ಲಿ ಮಾಸಿಕವಾಗಿ ಆದಾಯ ತರುವ ಯೋಜನೆ ಹುಡುಕುತ್ತಿರುವವರಿಗೆ ಎಸ್ ಬಿ ಐ‌ ನಲ್ಲಿರುವ ಯೋಜನೆ ಅನುಕೂಲ ಮಾಡಿಕೊಡಬಹುದು.

ಹಣದುಬ್ಬರದ ಒತ್ತಡದಿಂದಾಗಿ ಜಗತ್ತಿನಾದ್ಯಂತ ಹೂಡಿಕೆ ಆಯ್ಕೆಗಳು ಹೆಚ್ಚು ಅಸ್ಥಿರವಾಗಿವೆ. ಶೇರು ಮಾರುಕಟ್ಟೆ, ಉಳಿತಾಯ ಯೋಜನೆ ಕೂಡ ಅಪಾಯಕಾರಿಯಾಗಿ ಮಾರ್ಪಟ್ಟಿವೆ.

ಆದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಸ್ಥಿರವಾದ ಮಾಸಿಕ ಆದಾಯ ಖಾತ್ರಿಪಡಿಸುವ ಆನ್ಯುಯಿಟಿ (ವರ್ಷಾಸನ) ಯೋಜನೆಯನ್ನು ನೀಡುತ್ತದೆ.

ಕುಡಿದ ಅಮಲಿನಲ್ಲಿ ನಡುರಸ್ತೆಯಲ್ಲೇ ಯುವತಿಯ ರಂಪಾಟ; ಆಕೆಯ ಅವಾಂತರ ಕಂಡು ಪೊಲೀಸರೇ ಕಂಗಾಲು

ಯೋಜನೆಯಲ್ಲಿ ಠೇವಣಿದಾರರು ಅವಧಿಯ ಪ್ರಾರಂಭದಲ್ಲಿ ಬ್ಯಾಂಕಿನಲ್ಲಿ ಒಂದು ದೊಡ್ಡ ಮೊತ್ತವನ್ನು ಠೇವಣಿ ಮಾಡಬೇಕಾಗುತ್ತದೆ. ನಂತರ, ಬ್ಯಾಂಕ್ ಗ್ರಾಹಕರ ಬ್ಯಾಂಕ್ ಖಾತೆಗೆ ಮಾಸಿಕ ಕಂತು ಜಮಾ ನೀಡುತ್ತದೆ. ಕಂತು ಅಸಲು ಮೊತ್ತ ಹಾಗೂ ಬಡ್ಡಿಯನ್ನು ಒಳಗೊಂಡಿರುತ್ತದೆ.

ಬಡ್ಡಿ ದರಗಳು ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರಗಳಂತೆಯೇ ಇರುತ್ತವೆ. ಪ್ರಸ್ತುತ, ಎಸ್‌ಬಿಐ 3 ವರ್ಷದಿಂದ 10 ವರ್ಷಗಳವರೆಗಿನ ಠೇವಣಿಗಳಿಗೆ ಶೇಕಡಾ 5.4 ರಿಂದ 5.5 ರಷ್ಟು ಬಡ್ಡಿದರವನ್ನು ನೀಡುತ್ತದೆ.

ಹಿರಿಯ ನಾಗರಿಕರಿಗೆ, ಸಾಮಾನ್ಯ ಠೇವಣಿಗಿಂತ ಹೆಚ್ಚಿನ ಬಡ್ಡಿಯನ್ನು ನೀಡಲಾಗುತ್ತದೆ. 3ರಿಂದ 10 ವರ್ಷಗಳ ನಡುವಿನ ಠೇವಣಿಗಳಿಗೆ ಶೇಕಡಾ 5.95ರಿಂದ 6.30 ರಷ್ಟು ಬಡ್ಡಿ ನೀಡಲಾಗುತ್ತದೆ.

ಅಪ್ರಾಪ್ತ ವಯಸ್ಕರು ಸೇರಿದಂತೆ ಎಲ್ಲಾ ಭಾರತೀಯ ವಾಸಿಗಳು ಯೋಜನೆಗೆ ಅರ್ಹರು. ಎನ್‌ಆರ್‌ಇ ಮತ್ತು ಎನ್‌ಆರ್‌ಒಗೆ ಯೋಜನೆಯ ಲಾಭ ಪಡೆಯಲು ಅವಕಾಶವಿಲ್ಲ.

ಠೇವಣಿದಾರರ ಮರಣದ ಸಂದರ್ಭದಲ್ಲಿ 15 ಲಕ್ಷ ರೂ.ವರೆಗಿನ ಠೇವಣಿಗಳಿಗೆ ಅಕಾಲಿಕ ಹಿಂಪಡೆಯುವಿಕೆ ಲಭ್ಯವಿದೆ. 5 ಲಕ್ಷಕ್ಕಿಂತ ಹೆಚ್ಚಿನ ಠೇವಣಿಗಳ ಮೇಲೆ ಶೇಕಡಾ 1 ರಷ್ಟು ದಂಡ ವಿಧಿಸಲಾಗುತ್ತದೆ. ಅಲ್ಲದೆ ಶೇ.1ರಷ್ಟು ಕಡಿಮೆ ಬಡ್ಡಿಯನ್ನು ಸಹ ಬ್ಯಾಂಕ್ ನೀಡಲಿದೆ.

ಯೋಜನೆಯಡಿಯಲ್ಲಿ ಠೇವಣಿ ಮೊತ್ತದ ಶೇಕಡಾ 75 ರವರೆಗಿನ ಸಾಲ ಸೌಲಭ್ಯವನ್ನು ಅನುಮತಿಸಲಾಗಿದೆ. ಶಿಕ್ಷಣ, ಮದುವೆ ಇತ್ಯಾದಿ ವಿಶೇಷ ಸಂದರ್ಭಗಳಲ್ಲಿ ಇದನ್ನು ತೆಗೆದುಕೊಳ್ಳಬಹುದು.

ಕನಿಷ್ಠ ಹೂಡಿಕೆ ಮಿತಿ 1,000 ರೂ. ಆಗಿದ್ದು, ಆಫ್‌ಲೈನ್ ಗ್ರಾಹಕರಿಗೆ ಗರಿಷ್ಠ ಠೇವಣಿ ಮಿತಿ ಇಲ್ಲ. ಆನ್‌ಲೈನ್ ಗ್ರಾಹಕರಿಗೆ, ಇದು ಖಾತೆಯ ನಿಧಿ ವರ್ಗಾವಣೆ ಮಿತಿಯನ್ನು ಅವಲಂಬಿಸಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...