ಕೀವ್: ರಷ್ಯಾ ವಿರುದ್ಧ ಮಂಡಿಯೂರದೇ ಉಕ್ರೇನ್ ಹೋರಾಟವನ್ನು ಮುಂದುವರೆಸುತ್ತಿದ್ದು, 10 ಸಾವಿರ ರಷ್ಯಾ ಸೈನಿಕರನ್ನು ಹತ್ಯೆ ಮಾಡಲಾಗಿದೆ.
ಉಕ್ರೇನ್ ರಕ್ಷಣಾ ಸಚಿವಾಲಯದಿಂದ ಮಾಹಿತಿ ನೀಡಲಾಗಿದ್ದು, ಬಲಿಷ್ಠ ಪುಟಿನ್ ಪಡೆಯ 10 ಸಾವಿರ ಸೈನಿಕರನ್ನು ಉಕ್ರೇನ್ ಹೊಡೆದುರುಳಿಸಿದೆ ಎಂದು ಹೇಳಲಾಗಿದೆ.
ಯುದ್ಧದಲ್ಲಿ ರಷ್ಯಾದ 10 ಸಾವಿರ ಸೈನಿಕರನ್ನು ಹತ್ಯೆ ಮಾಡಲಾಗಿದೆ. 39 ವಿಮಾನ, ಎರಡು ಬೋಟ್, 40 ಹೆಲಿಕಾಪ್ಟರ್ ಗಳು, 409 ಸೇನಾವಾಹನ, 269 ಯುದ್ಧ ಟ್ಯಾಂಕರ್ ಗಳು ಹಾಗೂ 60 ಸೇನಾ ಇಂಧನ ವಾಹನಗಳನ್ನು ಧ್ವಂಸ ಮಾಡಲಾಗಿದೆ.
ಉಕ್ರೇನ್ ನಲ್ಲಿ ರಷ್ಯಾದ 10,000 ಯೋಧರನ್ನು ಹತ್ಯೆ ಮಾಡಲಾಗಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಸ್ಕಿ ಹೇಳಿದ್ದಾರೆ.