ಮಾಸ್ಕೋ; ಉಕ್ರೇನ್ ಮೇಲೆ ರಷ್ಯಾ ಭೀಕರ ಯುದ್ಧ ಮುಂದುವರೆಸಿದೆ. ಈ ನಡುವೆ ರಷ್ಯಾ ವಿದೇಶಿ ಕರೆನ್ಸಿ ಮಾರಾಟವನ್ನು ಅಮಾನತುಗೊಳಿಸಿದೆ ಎಂದು ತಿಳಿದುಬಂದಿದೆ.
ಸೆಪ್ಟೆಂಬರ್ 9ರವರೆಗೆ ವಿದೇಶಿ ಕರೆನ್ಸಿ ಮಾರಾಟವನ್ನು ರಷ್ಯಾ ಸಸ್ಪೆಂಡ್ ಮಾಡಿದೆ ಎಂದು ರಷ್ಯಾ ಸೆಂಟ್ರಲ್ ಬ್ಯಾಂಕ್ ಮಾಹಿತಿ ನೀಡಿದೆ.
ಉಕ್ರೇನ್ ಯುದ್ಧ: ರಷ್ಯಾದಲ್ಲಿ ವ್ಯಾಪಾರ ಸ್ಥಗಿತಗೊಳಿಸಿದ ಮೆಕ್ ಡೊನಾಲ್ಡ್ಸ್, ಸ್ಟಾರ್ ಬಕ್ಸ್, ಕೋಕ್, ಪೆಪ್ಸಿ; ಆದ್ರೂ ಉದ್ಯೋಗಿಗಳಿಗೆ ವೇತನ ಮುಂದುವರಿಕೆ
ಉಕ್ರೇನ್ ಮೇಲಿನ ಯುದ್ಧದ ಬೆನ್ನಲ್ಲೇ ರಷ್ಯಾ ಹಲವು ದೇಶಗಳ, ಕಂಪನಿಗಳ ನಿರ್ಬಂಧವನ್ನು ಎದುರಿಸುತ್ತಿದ್ದು, ಇದೀಗ ರಷ್ಯಾದಲ್ಲಿ ಪೆಪ್ಸಿ ಕಂಪನಿ ತನ್ನ ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸಿದೆ.
ರಷ್ಯಾದಲ್ಲಿ ಸೋಡಾ ಮಾರಾಟ, ಕೋಕಾ-ಕೋಲಾ ಕಂಪನಿಯ ವ್ಯವಹಾರಗಳನ್ನು ಪೆಪ್ಸಿ ಕಂಪನಿ ಸ್ಥಗಿತಗೊಳಿಸಿದೆ. ಅಲ್ಲದೇ ಮೆಕ್ ಡಾನಲ್ಡ್ಸ್ ಕೂಡ ಸುಮಾರು 800 ಸ್ಥಳಗಳಲ್ಲಿ ತನ್ನ ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ.