alex Certify BREAKING: ಕಣ್ಮರೆಯಾಗಿದ್ದ ರಷ್ಯಾ ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಸುರಕ್ಷಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಕಣ್ಮರೆಯಾಗಿದ್ದ ರಷ್ಯಾ ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಸುರಕ್ಷಿತ

ಸೈಬಿರೀಯಾ ಪ್ರದೇಶದಲ್ಲಿ ಕಾಣೆಯಾಗಿದ್ದ ರಷ್ಯಾದ ಪ್ರಯಾಣಿಕ ವಿಮಾನವು ಪತ್ತೆಯಾಗಿದ್ದು ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಜೀವಂತವಾಗಿದ್ದಾರೆ ಎಂದು ರಷ್ಯಾ ಅಧಿಕಾರಿಗಳು ಹೇಳಿದ್ದಾರೆ.

ಪಶ್ಚಿಮ ಸೈಬೀರಿಯಾದ ಟೋಮ್ಸ್ಕ್​ ಪ್ರಾಂತ್ಯದಲ್ಲಿ ರಷ್ಯಾದ 28 ಪ್ರಯಾಣಿಕರನ್ನ ಹೊರಬಲ್ಲ ಸಾಮರ್ಥ್ಯವುಳ್ಳ ವಿಮಾನವು ರಾಡಾರ್​ ಸಂಪರ್ಕವನ್ನ ಕಳೆದುಕೊಂಡಿತ್ತು. ಈ ವಿಮಾನದಲ್ಲಿ ಕನಿಷ್ಟ 17 ಪ್ರಯಾಣಿಕರಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಮಾನವು ರಾಡಾರ್ ಸಂಪರ್ಕ ಕಳೆದುಕೊಂಡ ತಕ್ಷಣವೇ ಅದನ್ನ ಪತ್ತೆ ಮಾಡಲು ಶೋಧ ಕಾರ್ಯ ಆರಂಭವಾಗಿತ್ತು. ವಿಮಾನವು ಕೆಡ್ರೋವೊಯ್​​ನಿಂದ ಟಾಮ್ಸ್ಕ್​​ಗೆ ಹಾರಾಟ ನಡೆಸಿತ್ತು ಎಂದು ವರದಿಯಾಗಿದೆ.

ರಷ್ಯಾದ ಕಮ್ಚಟ್ಕಾ ದ್ವೀಪದಲ್ಲಿ ಎಎನ್​ – 26 ಪ್ರಯಾಣಿಕರ ವಿಮಾನವು ದುರಂತಕ್ಕೀಡಾದ ಕೆಲವೇ ದಿನಗಳಲ್ಲಿ ಈ ಘಟನೆ ಸಂಭವಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...