ಸೈಬಿರೀಯಾ ಪ್ರದೇಶದಲ್ಲಿ ಕಾಣೆಯಾಗಿದ್ದ ರಷ್ಯಾದ ಪ್ರಯಾಣಿಕ ವಿಮಾನವು ಪತ್ತೆಯಾಗಿದ್ದು ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಜೀವಂತವಾಗಿದ್ದಾರೆ ಎಂದು ರಷ್ಯಾ ಅಧಿಕಾರಿಗಳು ಹೇಳಿದ್ದಾರೆ.
ಪಶ್ಚಿಮ ಸೈಬೀರಿಯಾದ ಟೋಮ್ಸ್ಕ್ ಪ್ರಾಂತ್ಯದಲ್ಲಿ ರಷ್ಯಾದ 28 ಪ್ರಯಾಣಿಕರನ್ನ ಹೊರಬಲ್ಲ ಸಾಮರ್ಥ್ಯವುಳ್ಳ ವಿಮಾನವು ರಾಡಾರ್ ಸಂಪರ್ಕವನ್ನ ಕಳೆದುಕೊಂಡಿತ್ತು. ಈ ವಿಮಾನದಲ್ಲಿ ಕನಿಷ್ಟ 17 ಪ್ರಯಾಣಿಕರಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಮಾನವು ರಾಡಾರ್ ಸಂಪರ್ಕ ಕಳೆದುಕೊಂಡ ತಕ್ಷಣವೇ ಅದನ್ನ ಪತ್ತೆ ಮಾಡಲು ಶೋಧ ಕಾರ್ಯ ಆರಂಭವಾಗಿತ್ತು. ವಿಮಾನವು ಕೆಡ್ರೋವೊಯ್ನಿಂದ ಟಾಮ್ಸ್ಕ್ಗೆ ಹಾರಾಟ ನಡೆಸಿತ್ತು ಎಂದು ವರದಿಯಾಗಿದೆ.
ರಷ್ಯಾದ ಕಮ್ಚಟ್ಕಾ ದ್ವೀಪದಲ್ಲಿ ಎಎನ್ – 26 ಪ್ರಯಾಣಿಕರ ವಿಮಾನವು ದುರಂತಕ್ಕೀಡಾದ ಕೆಲವೇ ದಿನಗಳಲ್ಲಿ ಈ ಘಟನೆ ಸಂಭವಿಸಿದೆ.