alex Certify ಗೂಗಲ್ – ವಾಟ್ಸಾಪ್‌ ಗೆ ರಷ್ಯಾದಿಂದ ಭಾರೀ ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೂಗಲ್ – ವಾಟ್ಸಾಪ್‌ ಗೆ ರಷ್ಯಾದಿಂದ ಭಾರೀ ದಂಡ

Russia fines Google for not deleting banned content | Arab Newsರಷ್ಯಾದ ಬಳಕೆದಾರರ ಡೇಟಾವನ್ನು ರಷ್ಯಾದ ಗಡಿಯೊಳಗೇ ಸಂಸ್ಕರಿಸಲು ವಿಫಲವಾದ ಕಾರಣ ಫೇಸ್ಬುಕ್‌ ಮಾಲೀಕತ್ವದ ವಾಟ್ಸಾಪ್‌ ವಿರುದ್ಧ ರಷ್ಯಾ ಸರ್ಕಾರವು ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.

ಇದಕ್ಕೂ ಒಂದು ದಿನ ಮುನ್ನ, ವೈಯಕ್ತಿಕ ಮಾಹಿತಿ ಸಂಬಂಧಿ ಕಾನೂನಿನ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಆಲ್ಫಬೆಟ್‌ ಸಂಸ್ಥೆಯ ಗೂಗಲ್‌ಗೆ ಮೂರು ದಶಲಕ್ಷ ರೂಬಲ್ ದಂಡ ವಿಧಿಸಿದ್ದ ರಷ್ಯಾದ ನ್ಯಾಯಾಲಯವೊಂದು ಇದೇ ಆರೋಪದ ಮೇಲೆ ಫೇಸ್ಬುಕ್ ಹಾಗೂ ಟ್ವಿಟರ್‌ಗಳ ಮೇಲೆ ಕ್ರಮ ಜರುಗಿಸಿದೆ.

ವಿದೇಶೀ ಟೆಕ್ ಕಂಪನಿಗಳಿಗೆ ರಷ್ಯಾದಲ್ಲಿ ಕಚೇರಿಗಳನ್ನು ತೆರೆಯಲು ಸೂಚಿಸುವ ಮಾಸ್ಕೋ ಆಗಾಗ ಸಾಮಾಜಿಕ ಜಾಲತಾಣದ ದಿಗ್ಗಜ ಸಂಸ್ಥೆಗಳ ಮೇಲೆ ದಂಡ ಹೇರುತ್ತಲೇ ಇರುತ್ತದೆ.

ವಿಚಾರಣೆ ವೇಳೆ ಕಾನೂನಿನ ಉಲ್ಲಂಘನೆ ಸಾಬೀತಾದಲ್ಲಿ ವಾಟ್ಸಾಪ್‌ ಒಂದು ದಶಲಕ್ಷದಿಂದ ಆರು ದಶಲಕ್ಷ ರೂಬಲ್‌ಗಳ ($13,700 – $82,250) ದಂಡ ಕಟ್ಟಬೇಕಾಗಿ ಬರಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...