ಹವಾಮಾನ ಬಿಕ್ಕಟ್ಟು ಬೇರೆ ಬೇರೆ ರೀತಿಯಲ್ಲಿ ನಮ್ಮನ್ನು ಆವರಿಸಿಕೊಳ್ಳುತ್ತಿದೆ. ಅದು ಅರಿವಿಗೆ ಬರುವಷ್ಟರಲ್ಲಿ ಕೈಮೀರಿರುತ್ತದೆ. ನ್ಯಾಶನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಹೊಸದಾಗಿ ಬಿಡುಗಡೆ ಮಾಡಿದ ಫೋಟೋಗಳು ಹವಾಮಾನ ಬಿಕ್ಕಟ್ಟು ಹೇಗೆ ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತಿದೆ ಎಂಬುದರ ಕಠೋರ ಎಚ್ಚರಿಕೆಯಾಗಿದೆ ಎಂಬುದನ್ನು ನೆನಪಿಸುವಂತಿದೆ.
ನಾಸಾದ ಉಪಗ್ರಹ ಚಿತ್ರಗಳು ಅಮೆರಿಕಾದ ಅತಿದೊಡ್ಡ ಜಲಾಶಯವಾದ ಹೂವರ್ ಅಣೆಕಟ್ಟಿನಲ್ಲಿರುವ ಲೇಕ್ ಮೀಡ್ ಕಳೆದ ಎರಡು ದಶಕಗಳಲ್ಲಿ ಎಷ್ಟು ಕುಗ್ಗಿದೆ ಎಂಬುದನ್ನು ತೋರಿಸುತ್ತದೆ. ಫೋಟೋಗಳು ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ಚಿತ್ರಗಳಾಗಿದ್ದು, 2000 ರಿಂದ ಹೇಗೆ ಗಾತ್ರದಲ್ಲಿ ತೀವ್ರವಾಗಿ ಕಡಿಮೆಯಾಗಿದೆ ಎಂಬುದನ್ನು ತೋರಿಸಿದೆ.
ನಾಸಾ ಪ್ರಕಾರ 22 ವರ್ಷಗಳಲ್ಲಿ ಈಗ ಲೇಕ್ ಮೀಡ್ನಲ್ಲಿ ನೀರಿನ ಮಟ್ಟವು ಅತ್ಯಂತ ಕಡಿಮೆ ಏಪ್ರಿಲ್ ಜುಲೈ 18, 2022ರ ವೇಳೆಗೆ “ಲೇಕ್ ಮೀಡ್ ಒಟ್ಟು ಸಾಮರ್ಥ್ಯದ ಕೇವಲ 27 ಪ್ರತಿಶತದಷ್ಟು ಮಾತ್ರ ತುಂಬಿದೆ.
ಇದೀಗ ಬಿಡುಗಡೆ ಮಾಡಿದ ಚಿತ್ರಗಳನ್ನು ಜುಲೈ 6, 2000 ಮತ್ತು ಜುಲೈ 3, 2022 ರಂದು ಲ್ಯಾಂಡ್ಸ್ಯಾಟ್ 7 ಮತ್ತು ಲ್ಯಾಂಡ್ಸ್ಯಾಟ್ 8ರಿಂದ ಪಡೆದುಕೊಳ್ಳಲಾಗಿದೆ. ( https://earthobservatory.nasa.gov/images/150111/lake-mead-keeps-dropping )
ದೇಶದ ಅತಿದೊಡ್ಡ ನೀರಿನ ಜಲಾಶಯವಾಗಿರುವುದರಿಂದ, ಲೇಕ್ ಮೀಡ್ ಏಳು ರಾಜ್ಯಗಳು, ಬುಡಕಟ್ಟು ಪ್ರದೇಶಗಳು ಮತ್ತು ಉತ್ತರ ಮೆಕ್ಸಿಕೋದಾದ್ಯಂತ ಜನರಿಗೆ ನೀರನ್ನು ಪೂರೈಸುತ್ತದೆ. ಈ ನಡುವೆ ನೀರಿನ ಮಟ್ಟವು ಅಪಾಯಕಾರಿ ಸಾಮರ್ಥ್ಯಕ್ಕೆ ಇಳಿಯುವುದರಿಂದ ಹವಾಮಾನ ಬದಲಾವಣೆಯ ಎಚ್ಚರಿಕೆ ಮತ್ತು ದೀರ್ಘ ಬರಗಾಲ ಬರುವ ಮುನ್ಸೂಚನೆ ಎಂದು ಅಂದಾಜಿಸಲಾಗಿದೆ.