
ಪರಿಸರ ಸೂಕ್ಷ್ಮ ಪ್ರದೇಶದಲ್ಲಿರುವ ಐಐಟಿ-ಮದ್ರಾಸ್ ಸಂಸ್ಥೆಯ ಆವರಣದಲ್ಲಿ ಕಳೆದ ವರ್ಷದ ಜುಲೈ-ಡಿಸೆಂಬರ್ ಅವಧಿಯಲ್ಲಿ 35 ಜಿಂಕೆಗಳು ಪ್ರಾಣ ಕಳೆದುಕೊಂಡಿವೆ ಎಂದು ಆರ್.ಟಿ.ಐ. ಉತ್ತರದ ಮೂಲಕ ಬೆಳಕಿಗೆ ಬಂದಿದೆ.
ಈ ಜಿಂಕೆಗಳ ಪೈಕಿ ಬರೀ 15 ಜಿಂಕೆಗಳಿಗೆ ಮಾತ್ರವೇ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಪ್ರಾಣಿ ಹಕ್ಕುಗಳ ಕಾರ್ಯಕರ್ತ ಅಶ್ವಿನ್ ಕುಮಾರ್ ಸಲ್ಲಿಸಿದ ಆರ್.ಟಿ.ಐ. ಅರ್ಜಿಗೆ ತಮಿಳುನಾಡು ವನ್ಯಜೀವಿ ವಿಭಾಗ ಉತ್ತರ ಕೊಟ್ಟಿದೆ.
ಪಿಎಫ್ ಬಡ್ಡಿ ದರ ಬಗ್ಗೆ ಉದ್ಯೋಗಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ
ಮೇಲ್ಕಂಡ ಅವಧಿಯಲ್ಲಿ, ಐಐಟಿ ಮದ್ರಾಸ್ ಆವರಣದಲ್ಲಿ 31 ಜಿಂಕೆಗಳು ಹಾಗೂ 4 ಕೃಷ್ಣ ಮೃಗಗಳು ಮೃತಪಟ್ಟಿವೆ ಎಂದು ತಿಳಿದು ಬಂದಿದೆ. ಡಿಸೆಂಬರ್ 2021ರಲ್ಲೇ 11 ಜಿಂಕೆಗಳು ಮೃತಪಟ್ಟಿರುವ ಕಳವಳಕಾರಿ ಅಂಶ ಇದೇ ವೇಳೆ ಬೆಳಕಿಗೆ ಬಂದಿದೆ.
ಇವುಗಳ ಪೈಕಿ ನಾಲ್ಕು ಜಿಂಕೆಗಳು ಪ್ಲಾಸ್ಟಿಕ್ ಹಾಗೂ ಪಾಲಿಥೀನ್ ಬ್ಯಾಗುಗಳನ್ನು ತಿಂದು, ಅದು ಅಜೀರ್ಣವಾಗಿ ಮೃತಪಟ್ಟ ವಿಚಾರ ತಿಳಿದು ಬಂದಿದೆ. ಎರಡು ಜಿಂಕೆಗಳು ನಾಯಿಗಳ ಕಡಿತದಿಂದ ಮೃತಪಟ್ಟಿವೆ.
2019-2020ರ ನಡುವೆ ನಾಯಿಗಳಿಂದಲೇ 55 ಜಿಂಕೆಗಳು ಮೃತಪಟ್ಟಿವೆ ಎಂದು ಐಐಟಿ-ಮದ್ರಾಸ್‌ನ ಆಡಳಿತ ತಿಳಿಸಿದೆ. ಐಐಟಿ-ಮದ್ರಾಸ್ ತನ್ನ ಮೂಲಸೌಕರ್ಯ ಅಭಿವೃದ್ಧಿ ಸಂದರ್ಭದಲ್ಲಿ ಅಲ್ಲಿನ ಪರಿಸರ ಸೂಕ್ಷ್ಮತೆ ಕಾಪಾಡಿಕೊಳ್ಳುವತ್ತ ಸ್ವಲ್ಪವೂ ಆಸಕ್ತಿ ತೋರುತ್ತಿಲ್ಲ ಎಂದು ಅರ್ಜಿದಾರರು ಆರೋಪ ಮಾಡಿದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲಿ ತನ್ನ ಕ್ಯಾಂಪಸ್ ಆವರಣದಲ್ಲಿ ಜಿಂಕೆಗಳ ಸಾವಿನ ಪ್ರಮಾಣ ಕುಗ್ಗುತ್ತಾ ಬಂದಿದೆ ಎಂದು ವಾದಿಸಿರುವ ಐಐಟಿ-ಮದ್ರಾಸ್, 2018ರಲ್ಲಿ 96 ಜಿಂಕೆಗಳು ಮೃತಪಟ್ಟರೆ 2021ರಲ್ಲಿ ಈ ಸಂಖ್ಯೆ 53ಕ್ಕೆ ಇಳಿದಿದೆ ಎಂದು ತಿಳಿಸಿದೆ.