alex Certify ‘ಜತೆಗಿರುವನು ಚಂದಿರ’ ನಾಟಕ ಪ್ರದರ್ಶನಕ್ಕೆ RSS – ಬಜರಂಗ ದಳ ಕಾರ್ಯಕರ್ತರಿಂದ ಅಡ್ಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಜತೆಗಿರುವನು ಚಂದಿರ’ ನಾಟಕ ಪ್ರದರ್ಶನಕ್ಕೆ RSS – ಬಜರಂಗ ದಳ ಕಾರ್ಯಕರ್ತರಿಂದ ಅಡ್ಡಿ

ಮುಸ್ಲಿಂ ಪ್ರಧಾನ ಕಥಾ ಹಂದರ ಹೊಂದಿದೆ ಎಂಬ ಕಾರಣಕ್ಕೆ ಜಯಂತ್ ಕಾಯ್ಕಿಣಿ ಅವರು ಕನ್ನಡಕ್ಕೆ ರೂಪಾಂತರ ಮಾಡಿರುವ ‘ಜತೆಗಿರುವನು ಚಂದಿರ’ ನಾಟಕ ಪ್ರದರ್ಶನಕ್ಕೆ ಆರ್ ಎಸ್ ಎಸ್, ಬಜರಂಗದಳ ಕಾರ್ಯಕರ್ತರು ಅಡ್ಡಿಪಡಿಸಿರುವ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಆನವಟ್ಟಿಯಲ್ಲಿ ನಡೆದಿದೆ.

ಭಾನುವಾರದಂದು ಈ ನಾಟಕ ಪ್ರದರ್ಶನವನ್ನು ಆನವಟ್ಟಿಯ ವೀರಶೈವ ಕಲ್ಯಾಣ ಮಂದಿರದಲ್ಲಿ ಆಯೋಜಿಸಲಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಅಕಾಡೆಮಿ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ಘಟಕಗಳ ಸಹಯೋಗದಲ್ಲಿ ಇದನ್ನು ಹಮ್ಮಿಕೊಳ್ಳಲಾಗಿತ್ತು.

ರಘು ಪುರಪ್ಪೆಮನೆ ಅವರು ನಿರ್ದೇಶಿಸಿದ್ದ ಈ ನಾಟಕದಲ್ಲಿ ಉಪನ್ಯಾಸಕರು, ಅತಿಥಿ ಉಪನ್ಯಾಸಕರು ಹಾಗೂ ವಿವಿಧ ಹುದ್ದೆಯಲ್ಲಿ ಇರುವವರು ಕಲಾವಿದರಾಗಿದ್ದರು. ರಾತ್ರಿ 7.45 ಕ್ಕೆ ನಾಟಕ ಆರಂಭವಾಗಿದೆ.

9:30 ಸುಮಾರಿಗೆ ಸಭಾಂಗಣಕ್ಕೆ ಬಂದ ಆರ್ ಎಸ್ ಎಸ್ ನ ಶ್ರೀಧರ್ ಆಚಾರ್, ಬಜರಂಗದಳದ ಮಂಜಣ್ಣ ‘ಬೋಲೋ ಭಾರತ್ ಮಾತಾ ಕಿ ಜೈ’ ‘ಜೈ ಹಿಂದ್’ ಘೋಷಣೆಗಳನ್ನು ಕೂಗಿ ನಾಟಕವನ್ನು ಕೂಡಲೇ ನಿಲ್ಲಿಸುವಂತೆ ತಾಕೀತು ಮಾಡಿದ್ದಾರೆ.

ಏಕಾಏಕಿ ನಡೆದ ಈ ಘಟನೆಯಿಂದ ಪ್ರೇಕ್ಷಕರು ದಿಗ್ಭ್ರಮೆಗೊಂಡಿದ್ದು, ಬಳಿಕ ಪ್ರೇಕ್ಷಕರನ್ನು ಬಲವಂತವಾಗಿ ಹೊರಗೆ ಕಳುಹಿಸಲಾಗಿದೆ. ತಾವು ನಾಟಕ ಪ್ರದರ್ಶನವನ್ನು ಅರ್ಧಕ್ಕೆ ನಿಲ್ಲಿಸಿದ ನಡೆಯನ್ನು ಸಮರ್ಥಿಸಿಕೊಂಡಿರುವ ಶ್ರೀಧರ್ ಆಚಾರ್ ಹಾಗೂ ಮಂಜಣ್ಣ ಪ್ರಸ್ತುತ ದೇಶದಲ್ಲಿ ಹಿಂದೂ – ಮುಸ್ಲಿಂ ಗಲಾಟೆ ನಡೆಯುತ್ತಿರುವಾಗ ಮುಸ್ಲಿಮರೇ ಪ್ರಧಾನವಾಗಿರುವ ಕಥಾ ವಸ್ತು ಹೊಂದಿರುವ ನಾಟಕ ಮಾಡಿರುವುದು ಖಂಡನೀಯ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...