
ಆದರೆ, ಮೂರು ದಿನಗಳ ಹಿಂದೆ ರುಸ್ತುಮಾ ನಾಪತ್ತೆಯಾಗಿದ್ದು, ರಿಯೊ, ರುಸ್ತುಮಾ ಬರುವಿಕೆಗಾಗಿ ಕಿಟಕಿಯ ಅಂಚಲ್ಲಿ ಕಾಯುತ್ತಾ ಕುಳಿತಿದೆ. ಗಿಳಿಯನ್ನು ಹುಡುಕಿಕೊಟ್ಟವರಿಗೆ 50 ಸಾವಿರ ರೂ. ರೂಪಾಯಿ ಬಹುಮಾನ ನೀಡುವುದಾಗಿ ಅರ್ಜುನ್ ಘೋಷಿಸಿದ್ದಾರೆ. ಪಟ್ಟಣದಾದ್ಯಂತ ಗಿಳಿಯ ಭಾವಚಿತ್ರವಿರುವ ಪೋಸ್ಟರ್ಗಳನ್ನು ಹಾಕಲಾಗಿದ್ದು, ಗಿಳಿಗಾಗಿ ಬೀದಿ ಬೀದಿ ಅಲೆದಿದ್ದಾರೆ.
ನಮ್ಮ ನೆಚ್ಚಿನ ಕುಟುಂಬದ ಸದಸ್ಯರಲ್ಲಿ ಒಬ್ಬರಾದ ಬೂದು ಬಣ್ಣದ ಗಿಳಿ 16/7/2022 ರಿಂದ ತುಮಕೂರಿನ ಜಯನಗರದಿಂದ ಕಾಣೆಯಾಗಿದೆ. ಯಾರಾದರೂ ನಮ್ಮ ಪ್ರೀತಿಯ ಗಿಳಿಯನ್ನು ಕಂಡುಕೊಂಡರೆ, ದಯವಿಟ್ಟು ನಮ್ಮನ್ನು ಸಂಪಕಿರ್ಸಿ ಮತ್ತು ನಿಮಗೆ 50,000 ರೂಪಾಯಿ ಬಹುಮಾನವಾಗಿ ನೀಡಲಾಗುವುದು ಎಂದು ಪೋಸ್ಟರ್ ಅಂಟಿಸಲಾಗಿದೆ.
ನಮ್ಮ ಸ್ಥಳದ ಸುತ್ತ ಎಲ್ಲೋ ಇದೆ. ಎಲ್ಲಿಯೂ ದೂರ ಹೋಗುತ್ತಿರಲಿಲ್ಲ. ಗಿಣಿಯನ್ನು ಹುಡುಕಲು ನಾವು ವಿನಂತಿಸುತ್ತೇವೆ. ಇದು ನಿಮ್ಮ ಟೆರೇಸ್, ಮರದ ಮೇಲೆ ಕಂಡುಬಂದರೆ, ಹಾರುತ್ತಿರುವುದನ್ನು ಗಮನಿಸಿದರೆ, ನಮಗೆ ತಿಳಿಸಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿರುವ ಅವರು, ನಾವು ಆ ಗಿಣಿಗೆ ಹೊಂದಿಕೊಂಡಿದ್ದೇವೆ. ನೋವು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.