ಜನರು ಹೊಸ ನಗರಕ್ಕೆ ಆಗಮಿಸಿದಾಗ ವಿಳಾಸ ಕೇಳುವುದು ಸಾಮಾನ್ಯ. ವಿಳಾಸ ಕೇಳುವುದನ್ನೇ ಬಿಜಿನೆಸ್ ಮಾಡಿಕೊಂಡ ದೇಸಿ ವ್ಯಕ್ತಿಯೊಬ್ಬ ಹಾಕಿರುವ ಪೋಸ್ಟ್ ಬಾರಿ ವೈರಲ್ ಆಗಿದ್ದು, ನಕ್ಕು ನಗಿಸುವಂತಿದೆ.
ಪ್ರತಿ ಬಾರಿಯೂ ಬಂದು ವಿಳಾಸ ಕೇಳುತ್ತಿರುವ ಜನರಿಂದ ಬೇಸತ್ತ ವ್ಯಾಪಾರಿಯೊಬ್ಬ ಅದನ್ನು ವ್ಯಾಪಾರದ ಅವಕಾಶವಾಗಿ ಪರಿವರ್ತಿಸಿದ್ದಾನೆ. ಟ್ವಿಟರ್ ಬಳಕೆದಾರರಾದ @priyapalnii, ಹಿಂದಿ ಪೋಸ್ಟರ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಈ ಪೋಸ್ಟ್ನಲ್ಲಿ ವಿಳಾಸ ಕೇಳಿದರೆ ರೂ.5 ಆಗುತ್ತದೆ, ವಿಳಾಸಕ್ಕೆ ತಲುಪಿಸಲು ರೂ. 10 ಆಗುತ್ತದೆ ಎಂದು ಬರೆದಿದ್ದಾರೆ. ಇದನ್ನು ನೋಡಿದವರು ಬಿದ್ದೂ ಬಿದ್ದೂ ನಕ್ಕಿದ್ದು, ತಾವು ಇಂಥದ್ದೇ ಬಿಜಿನೆಸ್ ಶುರು ಹಚ್ಚಿಕೊಳ್ಳುವುದಾಗಿ ಹೇಳಿದ್ದಾರೆ. ಇನ್ನು ಕೆಲವರು ವಿಳಾಸಕ್ಕೆ ತಲುಪಿಸಲು 10 ರೂಪಾಯಿ ಕೇಳಿರುವುದು ಬಹಳ ಕಡಿಮೆಯಾಯಿತು. ವಿಳಾಸಕ್ಕೆ ತಲುಪಿಸಿ ಎಂದರೆ ಅದು ಬಹಳ ದೂರವಿದ್ದರೂ ಅವನು ತಲುಪಿಸುತ್ತಾನೆಯೇ ಎಂದು ಪ್ರಶ್ನಿಸಿದ್ದಾರೆ.