alex Certify ಹೈದರಾಬಾದ್ ಕುಟುಂಬದ ನಗು ಮರಳಿ ತಂದ 16 ಕೋಟಿ ರೂ. ಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೈದರಾಬಾದ್ ಕುಟುಂಬದ ನಗು ಮರಳಿ ತಂದ 16 ಕೋಟಿ ರೂ. ಮದ್ದು

ಜಗತ್ತಿನ ಅತ್ಯಂತ ದುಬಾರಿ ಮೆಡಿಕಲ್ ಡ್ರಗ್‌ ಎಂದು ಪರಿಗಣಿತವಾದ ಜ಼ಾಲ್ಗೆನ್‌ಸ್ಮಾದ ಸಿಂಗಲ್-ಡೋಸ್ ಪಡೆಯುತ್ತಲೇ, ತಾನು ನಡೆದುಕೊಂಡು ಮನೆಗೆ ಬರಲು ಇಚ್ಛಿಸುವುದಾಗಿ ಮೂರು ವರ್ಷದ ಬಾಲಕ ಅಯಾಂಶ್ ತನ್ನ ಹೆತ್ತವರಿಗೆ ತಿಳಿಸಿದ್ದಾನೆ.

ಹೈದರಾಬಾದ್‌‌ನ ಈ ಬಾಲಕನ ಹೆತ್ತವರಾದ ರೂಪಲ್ ಹಾಗೂ ಯೋಗೇಶ್ ಗುಪ್ತಾಗೆ ಆ ದಿನ ತಮ್ಮ ಜೀವಮಾನದಲ್ಲೇ ಮರೆಯಲಾಗದ ಸ್ಮರಣೀಯ ದಿನವಾಗಿತ್ತು.

“ಪ್ರತಿ ತಾಯಿಗೆ ತನ್ನ ಮಗು ನಡೆಯುವುದನ್ನು ಹಾಗೂ ಓಡುವುದನ್ನು ನೋಡಲು ಇಷ್ಟವಾಗುತ್ತದೆ. ನಾನು ಅದನ್ನು ನೋಡಲು ಆಗಿರಲಿಲ್ಲ” ಎಂದು ಜೂನ್ 9ರ ಆ ಸುದಿನವನ್ನು ನೆನೆದು ಬಾಲಕನ ತಾಯಿ, 34-ವರ್ಷದ ರೂಪಲ್ ಹೇಳುತ್ತಾರೆ.

ಚಿನ್ನ ಖರೀದಿದಾರರಿಗೆ ಮುಖ್ಯ ಮಾಹಿತಿ, ಹಾಲ್ಮಾರ್ಕ್ ಜತೆಗೆ ಆಭರಣಕ್ಕೂ ಯುಐಡಿ ನಂಬರ್ ಕಡ್ಡಾಯ –ವರ್ತಕರಿಗೆ ಬಿಗ್ ಶಾಕ್

2018ರ ಜೂನ್ 4ರಂದು, ಅಯಾಂಶ್‌ ಗೆ ಅತ್ಯಪರೂಪದ ವಂಶವಾಹಿ ಸಮಸ್ಯೆಯಾದ ಸ್ಪೈನಲ್ ಮಸ್ಕುಲರ್‌ ಅಟ್ರೋಫಿ (ಎಸ್‌ಎಂಎ) ಸಮಸ್ಯೆಯಿದ್ದು, ಅದು ಆತನ ಜೀವಕ್ಕೇ ಕುತ್ತು ತರುವ ಮಟ್ಟದಲ್ಲಿತ್ತು. ಈ ಸಮಸ್ಯೆಗೆ ದೇಶದಲ್ಲಿ ಎಲ್ಲೂ ಸಹ ಚಿಕಿತ್ಸೆ ಲಭ್ಯವಿರಲಿಲ್ಲ. ಅದೂ ಅಲ್ಲದೇ ಈ ಸಮಸ್ಯೆಗೆ ಬೇಕಾದ ಮದ್ದನ್ನು ಆಮದು ಮಾಡಿಕೊಳ್ಳಲು ಜಿಎಸ್‌ಟಿ ಹೊರತಾಗಿಯೇ 16 ಕೋಟಿ ರೂ.ಗಳು ಬೇಕಾಗಿತ್ತು.

ಶಿಕ್ಷಕಿಯರಿಗೆ ಗುಡ್ ನ್ಯೂಸ್: ಮನೆಯಿಂದಲೇ ಕೆಲಸಕ್ಕೆ ಅವಕಾಶ

ಈ ಸಂದರ್ಭದಲ್ಲಿ, ಫೆಬ್ರವರಿ 5, 2021ರಿಂದ ಸಾಮೂಹಿಕವಾಗಿ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಮುಂದಾದ ಅಯಾಂಶ್‌ ತಂದೆ – ತಾಯಂದಿರ ನೆರವಿಗೆ ನಿಂತ 65,000 ದಷ್ಟು ದೇಣಿಗೆದಾರರು, ಅವರಿಗೆ ಅಮೆರಿಕದಿಂದ ಈ ದುಬಾರಿ ಮದ್ದನ್ನು ತರಿಸಿಕೊಡಲು ನೆರವಾಗಿದ್ದಾರೆ. ನಿಧಿ ಸಂಗ್ರಹಣೆ ಆರಂಭಿಸಿದ ಮೂರೂವರೆ ತಿಂಗಳಲ್ಲೇ ಮದ್ದಿಗೆ ಬೇಕಾದಷ್ಟು ಹಣವನ್ನು ಸಂಗ್ರಹಿಸುತ್ತೇವೆಂದು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ಯೋಗೇಶ್ ತಿಳಿಸುತ್ತಾರೆ.

ಗೋಫಂಡ್‌ಮೀ ಮುಖಾಂತರ ಛತ್ತೀಸ್‌ಘಡದಲ್ಲಿರುವ ತಮ್ಮ ಸಂಬಂಧಿಕರು, ಸ್ನೇಹಿತರು, ಕಾಲೇಜಿನ ಸಹಪಾಠಿಗಳು, ಸೆಲೆಬ್ರಿಟಿಗಳು, ದೇಣಿಗೆದಾರರ ಸಹಸ್ರಾರರು ಮಂದಿಯ ಬಳಗವೇ ಈ ನಿಧಿ ಸಂಗ್ರಹಣೆಗೆ ನೆರವಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...