ಗ್ರಾಹಕರಿಗೆ ನೀಡಿದ ಕೋಲ್ಡ್ ಡ್ರಿಂಕ್‌ನಲ್ಲಿ ಸತ್ತ ಹಲ್ಲಿ ಪತ್ತೆಯಾದ ಕಾರಣ ಮೆಕ್ ಡೊನಾಲ್ಡ್ಸ್ ತಲೆ ತಗ್ಗಿಸಬೇಕಾಗಿ ಬಂದಿದೆ.
ಸತ್ತ ಹಲ್ಲಿಯೊಂದು ತಂಪು ಪಾನೀಯದಲ್ಲಿ ತೇಲುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕೆಲವೇ ದಿನಗಳ ಬಳಿಕ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಮೆಕ್‌ಡೊನಾಲ್ಡ್ ಔಟ್‌ಲೆಟ್‌ಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ಅವರು ಮೂರು ತಿಂಗಳ ಕಾಲ ರೆಸ್ಟೋರೆಂಟ್‌ಗಳಲ್ಲಿ ಹಠಾತ್ ತಪಾಸಣೆ ನಡೆಸುವುದಾಗಿಯೂ ಹೇಳಿದ್ದಾರೆ.
ವೋಲ್ವೊ XC40 ರೀಚಾರ್ಜ್ ಎಲೆಕ್ಟ್ರಿಕ್ ಎಸ್‌ಯುವಿ ಹೊಸಕೋಟೆಯಲ್ಲಿ ಜೋಡಣೆ
ದಂಡವನ್ನು ಪಾವತಿಸಿದ ನಂತರ ಅಹಮದಾಬಾದ್‌ನ ಮೆಕ್ ಡೊನಾಲ್ಡ್ಸ್ ಸೋಲಾ ಏರಿಯಾದ ಔಟ್‌ಲೆಟ್ ಅನ್ನು ಸ್ವಚ್ಛಗೊಳಿಸಲು ಎರಡು ದಿನ ಕಾಲಾವಕಾಶ ನೀಡಲಾಗುತ್ತದೆ. ಸಂಪೂರ್ಣ ತಪಾಸಣೆಯ ನಂತರ ಮುನಿಸಿಪಲ್ ಕಾರ್ಪೊರೇಷನ್‌ಗೆ ಸರಿ ಎನಿಸಿದರೆ ಮಾತ್ರ ರೆಸ್ಟೋರೆಂಟ್ ಮರು ಆರಂಭಿಸಲು ಅನುಮತಿಸಲಾಗುತ್ತದೆ.
ಭಾರ್ಗವ್ ಜೋಶಿ ಎಂಬ ಗ್ರಾಹಕರು ತಮ್ಮ ತಂಪು ಪಾನೀಯದಲ್ಲಿ ಹಲ್ಲಿ ತೇಲುತ್ತಿರುವುದನ್ನು ಕಂಡುಕೊಂಡರು. ಜೋಶಿ ಮತ್ತು ಅವರ ಸ್ನೇಹಿತರು ನಾಲ್ಕು ಗಂಟೆಗಳ ಕಾಲ ಔಟ್‌ಲೆಟ್‌ನಲ್ಲಿ ಯಾರಾದರೂ ತಮ್ಮ ದೂರು ಕೇಳಬಹುದೇ ಎಂದು ಕಾಯುತ್ತಿದ್ದರು. ಅದರೆ ಅಲ್ಲಿನ ಸಿಬ್ಬಂದಿ ಕೇವಲ 300 ರೂಪಾಯಿ ಮರುಪಾವತಿ ಮಾತ್ರ ನೀಡಿ ಕಳಿಸಿದರು. ಬಳಿಕ ಪ್ರಕರಣ ಗಂಭೀರತೆ ಪಡೆದುಕೊಂಡಿತು.