ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ಸಲ್ಮಾನ್ ಖಾನ್ ಕೂಡ ಒಬ್ಬರು. ನಟನೆಯ ಜೊತೆಯಲ್ಲಿ ನಿರೂಪಣೆ ಮಾಡುವ ಮೂಲಕವೂ ಸಲ್ಮಾನ್ ಖಾನ್ ಕೋಟ್ಯಂತರ ಹಣ ಸಂಪಾದನೆ ಮಾಡ್ತಾರೆ.
ಮುಂಬೈನ ಐಷಾರಾಮಿ ಬಡಾವಣೆಗಳ ಪೈಕಿ ಒಂದಾದ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್ಮೆಂಟ್ನಲ್ಲಿ ಸಲ್ಮಾನ್ ಖಾನ್ ನೆಲೆಸಿದ್ದಾರೆ ಎಂಬುದು ಎಲ್ರಿಗೂ ತಿಳಿದಿರೋ ವಿಚಾರ, ನಟ ಸಲ್ಮಾನ್ ಖಾನ್ ಸಾಂತಾಕ್ರೂಸ್ನಲ್ಲಿರುವ ತಮ್ಮ ಕಮರ್ಷಿಯಲ್ ಪ್ರಾಪರ್ಟಿಯನ್ನು ಮುಂದಿನ ಐದು ವರ್ಷಗಳಿಗೆ ಬಾಡಿಗೆ ನೀಡಿದ್ದಾರೆ. ಈ ಮೂಲಕ ಪ್ರತಿ ತಿಂಗಳು ಸಲ್ಮಾನ್ ಖಾನ್ 1 ಕೋಟಿ ರೂಪಾಯಿ, ಬಾಡಿಗೆ ಹಣದ ರೂಪದಲ್ಲಿ ಪಡೆಯಲಿದ್ದಾರೆ.
ಮುಂದಿನ 60 ತಿಂಗಳುಗಳಿಗೆ ಸಾಂತಾಕ್ರಾಸ್ನಲ್ಲಿರುವ ತಮ್ಮ ವಾಣಿಜ್ಯ ಆಸ್ತಿಯನ್ನು ಸಲ್ಮಾನ್ ಖಾನ್ ಬಾಡಿಗೆ ರೂಪದಲ್ಲಿ ನೀಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ಈ ಅಗ್ರಿಮಂಟ್ ಆರಂಭಗೊಂಡಿದೆ.
2140 .71 ಚದರ ಮೀಟರ್ ಆಸ್ತಿಯನ್ನು ಸಲ್ಮಾನ್ ಖಾನ್ ಲ್ಯಾಂಡ್ಕ್ರಾಫ್ಟ್ ಪ್ರೈವೇಟ್ ಲಿಮಿಟೆಡ್ಗೆ ಬಾಡಿಗೆ ರೂಪದಲ್ಲಿ ನೀಡಿದ್ದಾರೆ. ಈ ಜಾಗವನ್ನು ಬಾಡಿಗೆಗೆ ಪಡೆಯಲು ಈ ಕಂಪನಿಯು 5 .4 ಕೋಟಿ ರೂಪಾಯಿ ಡೆಪಾಸಿಟ್ ನೀಡಿದೆ.
ಇನ್ನೊಂದು ಕುತೂಹಲಕಾರಿ ವಿಚಾರ ಏನಂದ್ರೆ, ಮೊದಲ ವರ್ಷ ಸಲ್ಮಾನ್ ಖಾನ್ರಿಗೆ 90 ಲಕ್ಷ ರೂಪಾಯಿ ಬಾಡಿಗೆ ರೂಪದಲ್ಲಿ ಹಣ ಸಿಗಲಿದೆ. ಎರಡನೇ ವರ್ಷದಿಂದ ಸಲ್ಮಾನ್ ಖಾನ್ರಿಗೆ ಪ್ರತಿ ತಿಂಗಳು 1 ಕೋಟಿ ರೂಪಾಯಿ ಸಿಗಲಿದೆ. ಪ್ರತಿ ವರ್ಷ ಐದು ಲಕ್ಷ ಬಾಡಿಗೆ ಮೊತ್ತ ಹೆಚ್ಚಲಿದೆ ಎಂದು ತಿಳಿದು ಬಂದಿದೆ.