ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ದಿನೇ ದಿನೇ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಯಲ್ ಎನ್‌ಫೀಲ್ಡ್‌ನ ಮಾತೃ ಸಂಸ್ಥೆ ಐಷರ್ ಮೋಟರ್ಸ್ ವಿವಿಧ ವರ್ಗಗಳ ಗ್ರಾಹಕರ ಅಗತ್ಯಕ್ಕನುಗುಣವಾಗಿ ಹೊಸ ರೇಂಜ್‌ನ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲು ಕೆಲಸ ಶುರು ಮಾಡಿದೆ.
ಭಾರತ ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ರಸ್ತೆಗಿಳಿಸಲು ಭಾರೀ ಪ್ರಯತ್ನದಲ್ಲಿರುವ ಐಷರ್ ಮೋಟರ್ಸ್, ಈ ವಾಹನಗಳನ್ನು ರಾಯಲ್ ಎನ್‌ಫೀಲ್ಡ್ ಬ್ರಾಂಡ್‌ನಡಿ ಬಿಡುಗಡೆ ಮಾಡುವುದೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ಕೊಟ್ಟಿಲ್ಲ.
ಮುದ್ದಿನ ಶ್ವಾನದ 5ನೇ ವರ್ಷದ ತಿಥಿಯಂದು ಕಂಚಿನ ಪ್ರತಿಮೆ ನಿರ್ಮಿಸಿದ ಕುಟುಂಬ
“ಭವಿಷ್ಯದ ದೃಷ್ಟಿಯಲ್ಲಿ, ವಿದ್ಯುತ್ ಚಾಲಿತ ಉತ್ಪನ್ನಗಳನ್ನು ತರಲು ನಾವು ಕೆಲಸ ಮಾಡುತ್ತಿದ್ದೇವೆ. ಇದೇ ವೇಳೆ ಆಂತರಿಕ ಕಂಬಷನ್ ಇಂಜಿನ್ ಉತ್ಪನ್ನಗಳ ಮೇಲೂ ನಮ್ಮ ಕೆಲಸ ಸಾಗಲಿದೆ. ಗ್ರಾಹಕರ ಬೇಡಿಕೆಗಳನ್ನು ಅರ್ಥ ಮಾಡಿಕೊಂಡಿರುವ ನಾವು ಜಾಗತಿಕ ಮಾರುಕಟ್ಟೆಗಳಿಗೆ ಪ್ರೀಮಿಯಂ ವಾಹನಗಳನ್ನು ವಿದ್ಯುತ್ ಚಾಲಿತ ಅವತರಣಿಕೆಯಲ್ಲಿ, ನಮ್ಮದೇ ಕ್ಲಾಸಿಕ್ ಶೈಲಿಯಲ್ಲಿ ಬಿಡುಗಡೆ ಮಾಡಲು ನಮ್ಮೆಲ್ಲಾ ಶ್ರಮ ಹಾಕುತ್ತಿದ್ದೇವೆ,” ಎಂದು ಐಷರ್ ಮೋಟರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಸಿದ್ಧಾರ್ಥ ಲಾಲ್ ತಿಳಿಸಿದ್ದಾರೆ.