alex Certify BIG NEWS: BJPಯಾಯ್ತು ಈಗ JDS ಸರದಿ; ಪಂಚರತ್ನ ರಥಯಾತ್ರೆಯಲ್ಲಿ ಮಾಜಿ ಸಿಎಂ HDK ಜೊತೆ ರೌಡಿ ಶೀಟರ್ ಪ್ರತ್ಯಕ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: BJPಯಾಯ್ತು ಈಗ JDS ಸರದಿ; ಪಂಚರತ್ನ ರಥಯಾತ್ರೆಯಲ್ಲಿ ಮಾಜಿ ಸಿಎಂ HDK ಜೊತೆ ರೌಡಿ ಶೀಟರ್ ಪ್ರತ್ಯಕ್ಷ

JDS Pancharatna Yatra | ನ.18 ಅಥವಾ 20ರಂದು ಪಂಚರತ್ನ ರಥಯಾತ್ರೆ ಪುನರಾರಂಭ:  ಎಚ್‌.ಡಿ.ಕುಮಾರಸ್ವಾಮಿ - ವಿಸ್ತಾರ ನ್ಯೂಸ್

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಒಂದೆಡೆ ರಾಜಕೀಯ ಪಕ್ಷಗಳು ಮತದಾರರ ಮನಗೆಲ್ಲಲು ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ. ಇನ್ನೊಂದೆಡೆ ರೌಡಿ ಶೀಟರ್ ಗಳು ರಾಜಕೀಯ ಪಕ್ಷಗಳನ್ನು ಸೇರುವ ನಿಟ್ಟಿನಲ್ಲಿ ತಯಾರಿ ನಡೆಸಿದ್ದು, ತಮ್ಮ ವಿರುದ್ಧದ ಪ್ರಕರಣಗಳಿಂದ ಹೊರ ಬರಲು ಪ್ಲಾನ್ ಮಾಡಿದ್ದಾರೆ. ರಾಜ್ಯ ಬಿಜೆಪಿ ಸಂಸದರು, ನಾಯಕರೊಂದಿಗೆ ರೌಡಿ ಶೀಟರ್ ಗಳು ಕಾಣಿಸಿಕೊಂಡ ಬೆನ್ನಲ್ಲೇ ಇದೀಗ ಜೆಡಿಎಸ್ ಸರದಿ ಆರಂಭವಾಗಿದೆ.

ಜೆಡಿಎಸ್ ಪಂಚರತ್ನ ರಥಯಾತ್ರೆ ವೇಳೆ ರೌಡಿ ಶೀಟರ್ ಗೊಬ್ಬರದ ರಂಗಸ್ವಾಮಿ ಪ್ರತ್ಯಕ್ಷನಾಗಿದ್ದಾನೆ. ಅದೂ ಕೂಡ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರ ಜೊತೆ ಕಾಣಿಸಿಕೊಂಡಿರುವುದು ರಾಜ್ಯ ರಾಜಕೀಯದಲ್ಲಿ ಇನ್ನಷ್ಟು ಕೆಸರೆರಚಾಟಕ್ಕೆ ಕಾರಣವಾಗಿದೆ.

ಜೆಡಿಎಸ್ ರಥಯಾತ್ರೆ ಸಂದರ್ಭದಲ್ಲಿ ನ.30ರಂದು ಗೊಬ್ಬರದ ರಂಗಸ್ವಾಮಿ ಕುಮಾರಸ್ವಾಮಿಯವರ ಜೊತೆ ಕಾಣಿಸಿಕೊಂಡಿದ್ದು, ಜೆಡಿಎಸ್ ಸೇರ್ಪಡೆಗೆ ಮುಂದಾಗಿದ್ದಾನಾ ಎಂಬ ಚರ್ಚೆ ಶುರುವಾಗಿದೆ. ಗೊಬ್ಬರದ ರಂಗಸ್ವಾಮಿ ತ್ಯಾಮಗೊಂಡ್ಲು ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...