alex Certify BREAKING : ಹಬ್ಬದ ಹೊತ್ತಲ್ಲೇ ರಾಜ್ಯದಲ್ಲಿ ಸಾಲು ಸಾಲು ಮರ್ಡರ್ : ಕತ್ತು ಹಿಸುಕಿ ವೃದ್ಧೆಯ ಬರ್ಬರ ಕೊಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಹಬ್ಬದ ಹೊತ್ತಲ್ಲೇ ರಾಜ್ಯದಲ್ಲಿ ಸಾಲು ಸಾಲು ಮರ್ಡರ್ : ಕತ್ತು ಹಿಸುಕಿ ವೃದ್ಧೆಯ ಬರ್ಬರ ಕೊಲೆ

ದೊಡ್ಡಬಳ್ಳಾಪುರ : ದೀಪಾವಳಿ ಹಬ್ಬದ ಹೊತ್ತಲ್ಲಿ ರಾಜ್ಯದಲ್ಲಿ ಸಾಲು ಸಾಲು ಮರ್ಡರ್ ಗಳು ನಡೆಯುತ್ತಿದ್ದು, ಇದೀಗ ದೊಡ್ಡಬಳ್ಳಾಪುರದಲ್ಲಿ ಕತ್ತು ಹಿಸುಕಿ ವೃದ್ಧೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಕೊಲೆಯಾದ ಮಹಿಳೆಯನ್ನು ಚೌಡಮ್ಮ (75) ಎಂದು ಗುರುತಿಸಲಾಗಿದೆ. ಇವರು ಜಮೀನು ಕಾಯುವ ಕೆಲಸ ಮಾಡುತ್ತಿದ್ದರು. ಈ ವೇಳೆ ಅವರ ತಲೆಗೆ ಹೊಡೆದು ಅವರ ಸೀರೆಯನ್ನು ಕುತ್ತಿಗೆಗೆ ಬಿಗಿದು ಕೊಲೆ ಮಾಡಲಾಗಿದೆ.
ಇತ್ತೀಚೆಗೆ ಜಾನುವಾರ ಮೇಯಿಸುವವರ ನಡುವೆ ಜಗಳ ನಡೆದಿದ್ದು, ಇದೇ ಸಿಟ್ಟಿಗೆ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಭೀಕರ ಮರ್ಡರ್ ನಡೆದಿದ್ದು, ಒಂದೇ ಕುಟುಂಬದ ನಾಲ್ವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಅದೇ ರೀತಿ ಬೀದರ್ ನಲ್ಲಿ ಕೂಡ ಕಲ್ಲಿನಿಂದ ಜಜ್ಜಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...