alex Certify ಲಸಿಕೆ ಹಾಕಿಸಿಕೊಂಡ್ರೆ ಸಿಗುತ್ತೆ 10 ಕೋಟಿ ಮೌಲ್ಯದ ಅಪಾರ್ಟ್ಮೆಂಟ್, ಚಿನ್ನದ ಬಿಸ್ಕತ್…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಸಿಕೆ ಹಾಕಿಸಿಕೊಂಡ್ರೆ ಸಿಗುತ್ತೆ 10 ಕೋಟಿ ಮೌಲ್ಯದ ಅಪಾರ್ಟ್ಮೆಂಟ್, ಚಿನ್ನದ ಬಿಸ್ಕತ್…..!

रोलेक्स घड़ी-टेस्ला से 10 करोड़ कैश तक, ऐसे लालच में वैक्सीन लगवाने आ रहे  लोग | rolex watch tesla car flat people coming to get covid vaccine for valuable  offer– News18 Hindi

ವಿಶ್ವಾದ್ಯಂತ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಲಸಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಅನೇಕ ಕಂಪನಿಗಳು ಮುಂದಾಗಿವೆ. ಕೆಲ ದೇಶಗಳಲ್ಲಿ ಲಸಿಕೆಗೆ ಉತ್ತೇಜನ ನೀಡಲು ಕೆಲ ಆಫರ್ ನೀಡ್ತಿವೆ. ವಿಶ್ವದ ಅತ್ಯಂತ ದುಬಾರಿ ರಾಷ್ಟ್ರಗಳಲ್ಲಿ ಒಂದಾದ ಹಾಂಗ್ ಕಾಂಗ್, ಲಸಿಕೆ ಪಡೆದ ಜನರಿಗೆ ಭರ್ಜರಿ ಉಡುಗೊರೆ ನೀಡ್ತಿದೆ.

ಹಾಂಗ್ ಕಾಂಗ್‌ನಲ್ಲಿ ಲಸಿಕೆ ಪಡೆದವರಿಗ ರೋಲೆಕ್ಸ್ ವಾಚ್, ಟೆಸ್ಲಾ ಎಲೆಕ್ಟ್ರಿಕ್ ಕಾರ್, ಚಿನ್ನದ ಬಿಸ್ಕತ್ತು ಮತ್ತು 10 ಕೋಟಿ ರೂಪಾಯಿ ಮೌಲ್ಯದ ಅಪಾರ್ಟ್‌ಮೆಂಟ್‌ನಂತಹ ಕೊಡುಗೆಗಳನ್ನು ನೀಡಲಾಗುತ್ತಿದೆ. ಲಾಟರಿ ಮೂಲಕ ವಿಜೇತರ ಆಯ್ಕೆ ನಡೆಯುತ್ತದೆ.

ಹಾಂಗ್ ಕಾಂಗ್ ನಲ್ಲಿ ಮೊದಲು ಲಸಿಕೆ ಪಡೆಯಲು ಹೆದರುತ್ತಿದ್ದ ಜನರು, ಆಪರ್ ನೋಡಿ ಈಗ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರ್ತಿದ್ದಾರೆ. ಹಾಂಗ್ ಕಾಂಗ್ ಒಟ್ಟೂ  ಜನಸಂಖ್ಯೆಯ ಶೇಕಡಾ 30ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ.

ಹಾಂಗ್ ಕಾಂಗ್ ಮಾತ್ರವಲ್ಲ ಫ್ರಾನ್ಸ್, ರಷ್ಯಾ, ಬ್ರಿಟನ್‌, ಅಮೆರಿಕಾದಲ್ಲೂ ಕೆಲ ಆಫರ್ ನೀಡಲಾಗುತ್ತಿದೆ. ಭಾರತದಲ್ಲಿಯೂ ಯುಕೋ ಮತ್ತು ಸೆಂಟ್ರಲ್ ಬ್ಯಾಂಕ್ ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದ ವಿಶೇಷ ಯೋಜನೆಗಳನ್ನು ಪ್ರಾರಂಭಿಸಿವೆ. ಲಸಿಕೆ ಹಾಕಿಸಿದ ಗ್ರಾಹಕರಿಗೆ ರಿಲಯನ್ಸ್ ಜನರಲ್ ಇನ್ಶುರೆನ್ಸ್ ವಿಶೇಷ ಯೋಜನೆಯನ್ನು ನೀಡ್ತಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...