alex Certify ಲಾಟರಿಯಲ್ಲಿ ಗೆದ್ದ ಹಣವನ್ನು ಸ್ನೇಹಿತರಿಗೆ ಹಂಚಿದ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಟರಿಯಲ್ಲಿ ಗೆದ್ದ ಹಣವನ್ನು ಸ್ನೇಹಿತರಿಗೆ ಹಂಚಿದ ದಂಪತಿ

ಇನ್ನೊಬ್ಬರಿಗೆ ಸಹಾಯ ಮಾಡುವುದು ನಿಮ್ಮಿಂದ ಸಾಧ್ಯ ಎಂದಾದಲ್ಲಿ ನೆರವಿನ ಹಸ್ತ ಚಾಚೋದು ನಿಜಕ್ಕೂ ಒಂದು ಮಾನವೀಯ ಕಾರ್ಯವೇ ಸರಿ…!

ಅಂದಹಾಗೆ ಈ ಮಾತನ್ನು ಹೇಳೋದಕ್ಕೆ ಕಾರಣ ಕೂಡ ಇದೆ. ಲಾಟರಿ ಗೆದ್ದಿದ್ದ ಬ್ರಿಟನ್​​ನ ದಂಪತಿ ತಮಗೆ ಬಂದಿದ್ದ ಹಣದಲ್ಲಿ ಬಹುಪಾಲು ಹಣವನ್ನು 30 ಮಂದಿಗೆ ದಾನ ಮಾಡುವ ಮೂಲಕ ಅನೇಕರಿಗೆ ಮಾದರಿ ಎನಿಸಿದ್ದಾರೆ.

ಶೆರೋನ್​ ಹಾಗೂ ನಿಗೆಲ್​​ ಎಂಬವರು ಎರಿಯೊಮಿಲಿಯನ್ಸ್ ಲಾಟರಿ ಜಾಕ್​ಪಾಟ್​​ನಲ್ಲಿ ಬರೋಬ್ಬರಿ 170 ಮಿಲಿಯನ್​ ಡಾಲರ್​ ಹಣವನ್ನು ಗೆದ್ದಿದ್ದರು. ಕೆಲ ಸಮಯದ ಕಾಲ ಇವರಿಬ್ಬರು ಈ ವಿಚಾರವನ್ನು ಗುಟ್ಟಾಗಿಯೇ ಇಟ್ಟಿದ್ದರು. ಅವರಿಗೆ ಹಣ ಸಿಗೋದು ಖಚಿತವಾಗುತ್ತಿದ್ದಂತೆಯೇ, ತಮ್ಮ ಸ್ನೇಹಿತರು ಹಾಗೂ ಸಂಬಂಧಿಗಳು ಸೇರಿದಂತೆ ಮೂವತ್ತು ಮಂದಿಗೆ ಚೆಕ್​​ ವಿತರಣೆ ಮಾಡುವ ಮೂಲಕ ಸಪ್ರೈಸ್​ ನೀಡಿದ್ದಾರೆ. ಬಹುಮಾನದ ಮೊತ್ತವನ್ನು ಹಂಚಿಕೆ ಮಾಡುವ ಮೂಲಕ ಈ ದಂಪತಿ ತಮ್ಮ ವಿಜಯವನ್ನು ವಿಶೇಷ ಅರ್ಥದಲ್ಲಿ ಆಚರಣೆ ಮಾಡಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಶೆರೋನ್​, ನಾವು ನಮ್ಮ ವಿಜಯವನ್ನು ಒಬ್ಬರೇ ಆಚರಿಸಿ ಶೋ ಆಫ್​ ಮಾಡುವ ಉದ್ದೇಶ ಹೊಂದಿರಲಿಲ್ಲ. ನಮಗೆ ಹತ್ತಿರವಾದವರಿಗೆ ಕೈಲಾದಷ್ಟು ಸಹಾಯ ಮಾಡಬೇಕು ಅನ್ನೋದು ನಮ್ಮ ಉದ್ದೇಶವಾಗಿತ್ತು. ನನ್ನ ಪತಿ ಹೋಟೆಲ್​ ಮ್ಯಾನೇಜರ್​ ಆಗಿದ್ದಾರೆ. ನಾವಿಬ್ಬರು ಸೇರಿ 30 ಮಂದಿಯ ಪಟ್ಟಿಯನ್ನು ತಯಾರು ಮಾಡಿದೆವು. ನಮಗೆ 2 ಮಕ್ಕಳು ಇರೋದ್ರಿಂದ ಪ್ರತಿಯೊಬ್ಬರಿಗೂ ಸಹಾಯ ಮಾಡೋದು ನಮ್ಮಿಂದ ಸಾಧ್ಯವಾಗುವ ಕೆಲಸವಲ್ಲ. ಹೀಗಾಗಿ ನಮ್ಮ ಕೈಲಾದಷ್ಟು ಸಹಾಯ ಮಾಡಿದ್ದೇವೆ ಎಂಬ ತೃಪ್ತಿ ಇದೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...