ವಾರಾಂತ್ಯ ಬಂದಾಗ ಬಹುತೇಕ ಎಲ್ಲಾ ಟಿವಿ ಚಾನೆಲ್ ಗಳಲ್ಲಿಯೂ ರಿಯಾಲಿಟಿ ಶೋಗಳದ್ದೇ ಸದ್ದು ಕಂಡು ಬರುವುದು ಸಾಮಾನ್ಯ. ಬಹುತೇಕ ಮಂದಿ ಕೂಡ ತಮ್ಮ ಸ್ನೇಹಿತರು, ಕುಟುಂಬದೊಂದಿಗೆ ಕೂತು ರಿಯಾಲಿಟಿ ಶೋಗಳನ್ನು ವೀಕ್ಷಿಸುತ್ತಾರೆ.
ಇದರಲ್ಲಿ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ‘ಡ್ಯಾನ್ಸ್ ದಿವಾನೆ-3’ ಕೂಡ ಒಂದು. ಇದರಲ್ಲಿ ಸ್ಪರ್ಧಿಗಳ ಪ್ರದರ್ಶನ ಕಂಡ ರೋಹಿತ್ ಶೆಟ್ಟಿ ಕಣ್ಣೀರಿಟ್ಟಿದ್ದಾರೆ.
BIG NEWS: ಐವರು ಸಾವಿಗೀಡಾದ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನಾಭರಣ; ಕಂತೆ ಕಂತೆ ನೋಟು ಪತ್ತೆ…!
ಈ ರಿಯಾಲಿಟಿ ಶೋನಲ್ಲಿ ನಿರ್ದೇಶಕ ರೋಹಿತ್ ಶೆಟ್ಟಿ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಸ್ಪರ್ಧಿಗಳ ಸ್ಟಂಟ್ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು. ಈ ವೇಳೆ ಸ್ಪರ್ಧಿಗಳ ಪ್ರದರ್ಶನ ಕಂಡ ರೋಹಿತ್ ಶೆಟ್ಟಿ ಭಾವುಕರಾಗಿ, ಗಳಗಳನೇ ಅತ್ತಿದ್ದಾರೆ. ರೋಹಿತ್ ಶೆಟ್ಟಿ ತಂದೆ ಎಂ.ಬಿ.ಶೆಟ್ಟಿ ಅವರು ಕೂಡ ಸ್ಟಂಟ್ ಮ್ಯಾನ್ ಆಗಿದ್ದರು. ಈ ಬಗ್ಗೆ ಮಾತನಾಡಿದ ರೋಹಿತ್, “ನಾನು ಇದನ್ನು ಬಾಲ್ಯದಿಂದ ನೋಡುತ್ತಾ ಬೆಳೆದಿದ್ದೇನೆ. ನನ್ನ ತಂದೆ ಕೂಡ ಸ್ಟಂಟ್ ಮಾಡುತ್ತಿದ್ದರು. ಆದರೆ ಈ ಕೆಲಸವನ್ನು ಯಾರೂ ಕೂಡ ಗೌರವಿಸುವುದಿಲ್ಲ” ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ.
https://www.youtube.com/watch?v=rS_Db6hwJ0I&feature=youtu.be