
ಆದರೆ ಈ ನಡುವೆ ಪಂದ್ಯದಲ್ಲಿ ನಡೆದ ಕೆಲ ಅದ್ಭುತ ಸನ್ನಿವೇಶಗಳು ಟ್ರೋಲಿಗರಿಗೆ ಬಾಡೂಟವನ್ನ ಬಡಿಸಿದೆ. ಪೆವಿಲಿಯನ್ ಕಡೆ ಮರಳಿದ ರೋಹಿತ್ ಶರ್ಮಾ ಬಳಿಕ ಮ್ಯಾಚ್ನ್ನು ಬೈನಾಕುಲರ್ ಸಹಾಯದಿಂದ ವೀಕ್ಷಿಸಿದ್ದು ಈ ಫೋಟೋವನ್ನ ಬಳಸಿಕೊಂಡು ಟ್ವಿಟರ್ನಲ್ಲಿ ತರಹೇವಾರಿ ಮಾದರಿಯ ಟ್ರೋಲ್ಗಳನ್ನ ಹರಿಬಿಡಲಾಗ್ತಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ತಂಡ ಟೀಂ ಇಂಡಿಯಾವನ್ನ ಕಟ್ಟಿಹಾಕುವಲ್ಲಿ ಯಶಸ್ವಿಯಾಯ್ತು. ಕೀವಿಸ್ ತಂಡದ ಬೌಲರ್ ಜೆಮಿಸನ್ ಬರೋಬ್ಬರಿ 5 ವಿಕೆಟ್ಗಳನ್ನ ಕಬಳಿಸುವ ಮೂಲಕ ಟೀಂ ಇಂಡಿಯಾ ಆಟಗಾರರ ಪಾಲಿಗೆ ದುಃಸ್ವಪ್ನದಂತಾದರು. ಇನ್ನುಳಿದಂತೆ ಬೌಲ್ಟ್ ಹಾಗೂ ವ್ಯಾಗ್ನರ್ ತಲಾ 2 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ಟೀಂ ಇಂಡಿಯಾ ಪರವಾಗಿ ಕೊಹ್ಲಿ 44 ಹಾಗೂ ರಹಾನೆ 49 ರನ್ಗಳನ್ನ ಸಿಡಿಸಿದ್ರು. ಇವರನ್ನ ಹೊರತುಪಡಿಸಿದ್ರೆ ಮಿಕ್ಕೆಲ್ಲ ಆಟಗಾರರು ಕೀವಿಸ್ ಬೌಲರ್ಗಳ ದಾಳಿಗೆ ಬಹುಬೇಗನೆ ಶರಣಾದರು .
https://twitter.com/albezzia_spock/status/1406254469394796558
https://twitter.com/AkshatOM3/status/1406332952284332036