alex Certify ಬೈನಾಕುಲರ್​​ನಲ್ಲಿ ಪಂದ್ಯ ವೀಕ್ಷಿಸಿದ ರೋಹಿತ್​ ಶರ್ಮಾ: ಟ್ವಿಟರ್​ನಲ್ಲಿ ಟ್ರೋಲ್​ಗಳ ಸುರಿಮಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈನಾಕುಲರ್​​ನಲ್ಲಿ ಪಂದ್ಯ ವೀಕ್ಷಿಸಿದ ರೋಹಿತ್​ ಶರ್ಮಾ: ಟ್ವಿಟರ್​ನಲ್ಲಿ ಟ್ರೋಲ್​ಗಳ ಸುರಿಮಳೆ

ಐಸಿಸಿ ಟೆಸ್ಟ್​​ ಚಾಂಪಿಯನ್​ಶಿಫ್​​ ಫೈನಲ್​ ಪಂದ್ಯಾವಳಿಯಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಆರಂಭಿಕ ಆಟಗಾರರಾಗಿ ಶುಭಮನ್​ ಗಿಲ್​ ಜೊತೆ ಕಣಕ್ಕಿಳಿದ ರೋಹಿತ್‌ ಶರ್ಮಾ ಟೀಂ ಇಂಡಿಯಾ ತಂಡಕ್ಕೆ ಉತ್ತಮ ಆರಂಭ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಕೈಲೆ ಜೆಮಿಸನ್​ ಮಾರಕ ಬೌಲಿಂಗ್​ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ 217 ರನ್​ಗಳಿಗೆ ಸರ್ವಪತನ ಕಂಡಿದೆ.

ಆದರೆ ಈ ನಡುವೆ ಪಂದ್ಯದಲ್ಲಿ ನಡೆದ ಕೆಲ ಅದ್ಭುತ ಸನ್ನಿವೇಶಗಳು ಟ್ರೋಲಿಗರಿಗೆ ಬಾಡೂಟವನ್ನ ಬಡಿಸಿದೆ. ಪೆವಿಲಿಯನ್​ ಕಡೆ ಮರಳಿದ ರೋಹಿತ್​ ಶರ್ಮಾ ಬಳಿಕ ಮ್ಯಾಚ್​ನ್ನು ಬೈನಾಕುಲರ್​ ಸಹಾಯದಿಂದ ವೀಕ್ಷಿಸಿದ್ದು ಈ ಫೋಟೋವನ್ನ ಬಳಸಿಕೊಂಡು ಟ್ವಿಟರ್​ನಲ್ಲಿ ತರಹೇವಾರಿ ಮಾದರಿಯ ಟ್ರೋಲ್​ಗಳನ್ನ ಹರಿಬಿಡಲಾಗ್ತಿದೆ.

ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ನ್ಯೂಜಿಲೆಂಡ್​ ತಂಡ ಟೀಂ ಇಂಡಿಯಾವನ್ನ ಕಟ್ಟಿಹಾಕುವಲ್ಲಿ ಯಶಸ್ವಿಯಾಯ್ತು. ಕೀವಿಸ್​ ತಂಡದ ಬೌಲರ್​ ಜೆಮಿಸನ್​ ಬರೋಬ್ಬರಿ 5 ವಿಕೆಟ್​ಗಳನ್ನ ಕಬಳಿಸುವ ಮೂಲಕ ಟೀಂ ಇಂಡಿಯಾ ಆಟಗಾರರ ಪಾಲಿಗೆ ದುಃಸ್ವಪ್ನದಂತಾದರು. ಇನ್ನುಳಿದಂತೆ ಬೌಲ್ಟ್​ ಹಾಗೂ ವ್ಯಾಗ್ನರ್​ ತಲಾ 2 ವಿಕೆಟ್​ ಉರುಳಿಸುವಲ್ಲಿ ಯಶಸ್ವಿಯಾದರು. ಟೀಂ ಇಂಡಿಯಾ ಪರವಾಗಿ ಕೊಹ್ಲಿ 44 ಹಾಗೂ ರಹಾನೆ 49 ರನ್​ಗಳನ್ನ ಸಿಡಿಸಿದ್ರು. ಇವರನ್ನ ಹೊರತುಪಡಿಸಿದ್ರೆ ಮಿಕ್ಕೆಲ್ಲ ಆಟಗಾರರು ಕೀವಿಸ್​ ಬೌಲರ್​ಗಳ ದಾಳಿಗೆ ಬಹುಬೇಗನೆ ಶರಣಾದರು .

— SHIRISH ♀️ ?? (@albezzia_spock) June 19, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...