alex Certify ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಿಂದ ಹೊರಗುಳಿದ ರೋಹಿತ್​ ಶರ್ಮಾ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಿಂದ ಹೊರಗುಳಿದ ರೋಹಿತ್​ ಶರ್ಮಾ…..!

ಟೀಂ ಇಂಡಿಯಾ ಟೆಸ್ಟ್​ ಸರಣಿಯ ನೂತನ ಉಪ ನಾಯಕ ರೋಹಿತ್​ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್​ ಸರಣಿಯಿಂದ ಹೊರಗುಳಿದಿದ್ದಾರೆ.

34 ವರ್ಷದ ರೋಹಿತ್​ ಶರ್ಮಾರನ್ನು ಬಿಸಿಸಿಐ ಕೆಲ ದಿನಗಳ ಹಿಂದಷ್ಟೇ ಅಂತಾರಾಷ್ಟ್ರೀಯ ಸೀಮಿತ ಓವರ್​ಗಳ ಪಂದ್ಯಕ್ಕೆ ನಾಯಕರನ್ನಾಗಿ ನೇಮಿಸಿತ್ತು ಹಾಗೂ ಟೆಸ್ಟ್​ ಸರಣಿಯ ಉಪನಾಯಕರನ್ನಾಗಿ ಮಾಡಿತ್ತು. ಆದರೆ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್​​ನಲ್ಲಿ ಅಭ್ಯಾಸ ಮಾಡುತ್ತಿದ್ದ ವೇಳೆ ರೋಹಿತ್​ ಶರ್ಮಾ ಗಾಯಗೊಂಡಿದ್ದಾರೆ. ಹೀಗಾಗಿ ರೋಹಿತ್​ ಶರ್ಮಾ ಸ್ಥಾನವನ್ನು ಗುಜರಾತ್​​ನ ಪ್ರಿಯಾಂಕ್​ ಪಾಂಚಾಲಾ​ ತುಂಬಲಿದ್ದಾರೆ.

ರೋಹಿತ್​ ಶರ್ಮಾರಿಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಏಕದಿನ ಸರಣಿಯನ್ನು ಆಡುವ ಬಗ್ಗೆ ಯಾವುದೇ ದೃಢೀಕರಣವಿಲ್ಲ. ಮೂರು ಪಂದ್ಯಗಳ ಟೆಸ್ಟ್​ ಸರಣಿಗೆ ಸಜ್ಜಾಗುವ ಸಲುವಾಗಿ ಮುಂಬೈನಲ್ಲಿ ರೋಹಿತ್​ ಕಠಿಣ ಅಭ್ಯಾಸದಲ್ಲಿ ತೊಡಗಿದ್ದರು ಎನ್ನಲಾಗಿದೆ. ಅಭ್ಯಾಸದ ವೇಳೆ ರೋಹಿತ್​ ಶರ್ಮಾ ಕೈಗೆ ಬಲವಾದ ಪೆಟ್ಟು ಬಿದ್ದಿದೆ.

ರೋಹಿತ್​ ಶರ್ಮಾ ಕೈಗೆ ಕೆಲವು ಸಮಸ್ಯೆ ಆಗಿದೆ. ವೈದ್ಯಕೀಯ ತಂಡವು ಇದನ್ನು ಸರಿಪಡಿಸಲು ಯತ್ನಿಸುತ್ತಿದೆ ಎಂದು ಕ್ರಿಕೆಟಿಗ ರೋಹಿತ್​ ಶರ್ಮಾ ಆಪ್ತ ಮೂಲಗಳು ತಿಳಿಸಿವೆ.

ಇಂದು ರಾತ್ರಿ ಮುಂಬೈ ತಂಡದ ಹೋಟೆಲ್​ನಲ್ಲಿ ವರದಿ ಮಾಡಿಕೊಳ್ಳುವಂತೆ ಪಾಂಚಾಲ್​ಗೆ ತಿಳಿಸಲಾಗಿದೆ. ಇತ್ತೀಚಿಗೆ ದಕ್ಷಿಣ ಆಫ್ರಿಕಾದಲ್ಲಿ ಆಡಿದ ಪಂದ್ಯವನ್ನು ಗಮನದಲ್ಲಿರಿಸಿ ಪಾಂಚಾಲ್​ರನ್ನು ಬಿಸಿಸಿಐ ಸಂಪರ್ಕಿಸಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...