ಟೀಂ ಇಂಡಿಯಾ ಟೆಸ್ಟ್ ಸರಣಿಯ ನೂತನ ಉಪ ನಾಯಕ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.
34 ವರ್ಷದ ರೋಹಿತ್ ಶರ್ಮಾರನ್ನು ಬಿಸಿಸಿಐ ಕೆಲ ದಿನಗಳ ಹಿಂದಷ್ಟೇ ಅಂತಾರಾಷ್ಟ್ರೀಯ ಸೀಮಿತ ಓವರ್ಗಳ ಪಂದ್ಯಕ್ಕೆ ನಾಯಕರನ್ನಾಗಿ ನೇಮಿಸಿತ್ತು ಹಾಗೂ ಟೆಸ್ಟ್ ಸರಣಿಯ ಉಪನಾಯಕರನ್ನಾಗಿ ಮಾಡಿತ್ತು. ಆದರೆ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿ ಅಭ್ಯಾಸ ಮಾಡುತ್ತಿದ್ದ ವೇಳೆ ರೋಹಿತ್ ಶರ್ಮಾ ಗಾಯಗೊಂಡಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಸ್ಥಾನವನ್ನು ಗುಜರಾತ್ನ ಪ್ರಿಯಾಂಕ್ ಪಾಂಚಾಲಾ ತುಂಬಲಿದ್ದಾರೆ.
ರೋಹಿತ್ ಶರ್ಮಾರಿಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಏಕದಿನ ಸರಣಿಯನ್ನು ಆಡುವ ಬಗ್ಗೆ ಯಾವುದೇ ದೃಢೀಕರಣವಿಲ್ಲ. ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗುವ ಸಲುವಾಗಿ ಮುಂಬೈನಲ್ಲಿ ರೋಹಿತ್ ಕಠಿಣ ಅಭ್ಯಾಸದಲ್ಲಿ ತೊಡಗಿದ್ದರು ಎನ್ನಲಾಗಿದೆ. ಅಭ್ಯಾಸದ ವೇಳೆ ರೋಹಿತ್ ಶರ್ಮಾ ಕೈಗೆ ಬಲವಾದ ಪೆಟ್ಟು ಬಿದ್ದಿದೆ.
ರೋಹಿತ್ ಶರ್ಮಾ ಕೈಗೆ ಕೆಲವು ಸಮಸ್ಯೆ ಆಗಿದೆ. ವೈದ್ಯಕೀಯ ತಂಡವು ಇದನ್ನು ಸರಿಪಡಿಸಲು ಯತ್ನಿಸುತ್ತಿದೆ ಎಂದು ಕ್ರಿಕೆಟಿಗ ರೋಹಿತ್ ಶರ್ಮಾ ಆಪ್ತ ಮೂಲಗಳು ತಿಳಿಸಿವೆ.
ಇಂದು ರಾತ್ರಿ ಮುಂಬೈ ತಂಡದ ಹೋಟೆಲ್ನಲ್ಲಿ ವರದಿ ಮಾಡಿಕೊಳ್ಳುವಂತೆ ಪಾಂಚಾಲ್ಗೆ ತಿಳಿಸಲಾಗಿದೆ. ಇತ್ತೀಚಿಗೆ ದಕ್ಷಿಣ ಆಫ್ರಿಕಾದಲ್ಲಿ ಆಡಿದ ಪಂದ್ಯವನ್ನು ಗಮನದಲ್ಲಿರಿಸಿ ಪಾಂಚಾಲ್ರನ್ನು ಬಿಸಿಸಿಐ ಸಂಪರ್ಕಿಸಿದೆ ಎನ್ನಲಾಗಿದೆ.