ಐಪಿಎಲ್ ಟೂರ್ನಮೆಂಟ್‌ನಲ್ಲಿ ಮುಂಬಯಿ ಇಂಡಿಯನ್ಸ್‌ಗೆ ರೋಹಿತ್ ಶರ್ಮಾ ಕ್ಯಾಪ್ಟನ್ ಆಗಿದ್ದು, ರಾಯಲ್ ಚಾಲೆಂಜರ್ಸ್ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕರಾಗಿದ್ದರೂ ಕೂಡ ಭಾರತದ ಕ್ರಿಕೆಟ್ ತಂಡ ಎಂದು ಬಂದಾಗ ಮಾತ್ರ ಇಬ್ಬರೂ ಕ್ರಿಕೆಟ್ ತಾರೆಯರು ಒಂದೇ ಟೀಮ್.
ಸದ್ಯಕ್ಕಂತೂ ಕೊಹ್ಲಿಯನ್ನು ಕ್ಯಾಪ್ಟನ್ ಸ್ಥಾನದಿಂದ ಕೆಳಕ್ಕೆ ಇಳಿಸಿ ರೋಹಿತ್ ಶರ್ಮಾಗೆ ಕ್ಯಾಪ್ಟೆನ್ಸಿ ನೀಡಲಾಗಿರುವುದು ಕೊಹ್ಲಿ ಫ್ಯಾನ್ಸ್‌ಗೆ ನುಂಗಲಾರದ ತುತ್ತಾಗಿದೆ. ಹಿಂದೆ ಮಹೇಂದ್ರ ಸಿಂಗ್ ಧೋನಿ ಅವರನ್ನು ಕ್ಯಾಪ್ಟನ್ ಸ್ಥಾನದಿಂದ ಕಿತ್ತೊಗೆದು, ಕೊಹ್ಲಿಗೆ ವಹಿಸಿದ್ದನ್ನು ಈಗಲೂ ಹಲವರು ಜೀರ್ಣಿಸಿಕೊಂಡಿಲ್ಲ.
ಕೇವಲ 9 ಸೆಕೆಂಡ್ಗಳಲ್ಲಿ ನೆಲಸಮಗೊಳ್ಳಲಿದೆ ನೋಯ್ಡಾದ ಅತಿ ಎತ್ತರದ ಅವಳಿ ಕಟ್ಟಡ
ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಶ್ರೀಲಂಕಾದ ನಡುವೆ ‘ಪಿಂಕ್ ಬಾಲ್ ಟೆಸ್ಟ್’ ಪಂದ್ಯ ನಡೆಯಿತು. ಈ ವೇಳೆ ಪೆವಿಲಿಯನ್ ಸ್ಟ್ಯಾಂಡಿನಲ್ಲಿ ಕುಳಿತಿದ್ದ ಇಬ್ಬರು ಹುಡುಗರು ಕೈನಲ್ಲಿ ಹಿಡಿದಿದ್ದ ಪೋಸ್ಟರ್‌ವೊಂದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಹುಡುಗರ ಕೈಗೆ ಪೋಸ್ಟರ್ ಕೊಟ್ಟ ತಂದೆಯೊಬ್ಬ ಫೋಟೊ ಕ್ಲಿಕ್ಕಿಸಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಪೋಸ್ಟರ್‌ನಲ್ಲಿ ’’ರೋಹಿತ್ ನನ್ನ ಕ್ಯಾಪ್ಟನ್ ಅಲ್ಲ, ಕೊಹ್ಲಿಗೆ ಮತ್ತೆ ಸ್ಥಾನ ಕೊಡಿ’’ ಎಂದು ಬರೆಯಲಾಗಿದೆ. ಇದು ರೋಹಿತ್ ಶರ್ಮಾ ಫ್ಯಾನ್ಸ್ ಮತ್ತು ಕೊಹ್ಲಿ ವಿರೋಧಿಗಳನ್ನು ತೀವ್ರವಾಗಿ ಕೆರಳಿಸಿದೆ.
ಟ್ವಿಟರ್‌ನಲ್ಲಿ ಈ ಬಗ್ಗೆ ಹಲವರಿಂದ ಪ್ರತಿಕ್ರಿಯೆಗಳು ಬಂದಿದ್ದು, ಅದರಲ್ಲಿ ಜಿಂಕಿಸ್ಮಿತಾ ಎಂಬ ಖಾತೆಯ ಬಳಕೆದಾರರು, ’’ ರೋಹಿತ್ ಭಾರತದ ಕ್ರಿಕೆಟ್ ತಂಡದ ಕ್ಯಾಪ್ಟನ್ ಎಂದು ನಾವು ಒಪ್ಪಿದ್ದೇವೆ. ನಿಮ್ಮ ಹುಡುಗರು ಒಪ್ಪಿಕೊಳ್ಳದಿದ್ದರೆ ನಷ್ಟವಿಲ್ಲ. ಅವರಿಗೆ ಬುದ್ಧಿ ಹೇಳಿ’’ ಎಂದು ಫೋಟೊ ಹಾಕಿದ ತಂದೆಗೆ ಪರೋಕ್ಷವಾಗಿ ತಪರಾಕಿ ಹಾಕಿದ್ದಾರೆ.
ರೋಹಿತ್ ಶರ್ಮಾನಂತಹ ಬ್ಯಾಟಿಂಗ್ ದಿಗ್ಗಜ, ’ಹಿಟ್‌ಮ್ಯಾನ್’ ಇಲ್ಲದೆ ಹೋಗಿದ್ದರೆ ಕೊಹ್ಲಿ ನಾಯಕರಾಗಿ ಏನೂ ಕೂಡ ಸಾಧನೆ ಮಾಡಲಾಗುತ್ತಿರಲಿಲ್ಲ ಎಂದು ಮತ್ತೊಬ್ಬ ಟ್ವೀಟಿಗರು ಆಕ್ರೋಶ ಹೊರಹಾಕಿದ್ದಾರೆ.