alex Certify ಸಾಲದ ಡಾಕ್ಯುಮೆಂಟ್​ ಸ್ವೀಕರಿಸುತ್ತೆ ಈ ರೋಬಾಟ್​…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲದ ಡಾಕ್ಯುಮೆಂಟ್​ ಸ್ವೀಕರಿಸುತ್ತೆ ಈ ರೋಬಾಟ್​…!

ಬ್ಯಾಂಕ್​ನಲ್ಲಿ ಜನರ ಸೇವೆಗೆ ಆನ್​ಲೈನ್​ ವ್ಯವಸ್ಥೆಗಳಿವೆ. ಅದನ್ನು ಹೊರತಾಗಿ ರೋಬಾಟ್​ ಕೂಡ ಎಂಟ್ರಿ ಕೊಡುವ ಕಾಲ ಸನ್ನಿಹಿತವಾಗಿದೆ. ಹೋಟೆಲ್​ನಲ್ಲಿ ರೋಬಾಟ್​ ಸರ್ವಿಸ್ ನೀಡಿದ್ದಿದೆ, ಈಗ ಬ್ಯಾಂಕಲ್ಲೂ ಸಹ ರೋಬಾಟ್​ ಕಾಣಿಸಿಕೊಂಡಿದೆ.

ಕೇರಳದ ಸ್ಟಾರ್ಟ್​ಅಪ್​ ರೊಬೊಟಿಕ್ಸ್​ ಕಂಪನಿ, ಮಂಜೂರಾದ ಸಾಲದ ದಾಖಲೆಗಳನ್ನು ಸ್ವೀಕರಿಸಲು ತನ್ನ ಸುಧಾರಿತ ರೋಬೋಟ್​ ಸಿದ್ಧಪಡಿಸಿದೆ. ತಾವು ಸಾಲ ಮಂಜೂರಾದ ಬ್ಯಾಂಕಿಗೆ ಈ ರೋಬಾಟ್​ ಅನ್ನು ಅಭಿವೃದ್ಧಿಪಡಿಸಿಕೊಟ್ಟು ಅಚ್ಚರಿ ಮೂಡಿಸಿದೆ.

ಇದೀಗ, ಅವರ ಔಟ್​-ಆಫ್​ ದಿ ಬಾಕ್ಸ್​ ಪ್ರಯತ್ನವು ವೈರಲ್​ ಆಗಿದ್ದು, ನೆಟ್ಟಿಗರು ತಮ್ಮ ಆಲೋಚನೆಗಳನ್ನು ಹರಿಯಬಿಟ್ಟಿದ್ದಾರೆ. ಅನಂತ್​ ರೂಪನಗುಡಿ ಅವರು ಹಂಚಿಕೊಂಡ ಕ್ಲಿಪ್​ನಲ್ಲಿ ಬ್ಯಾಂಕ್​ ಅಧಿಕಾರಿಗಳಿಂದ ರೋಬಾಟ್​ ದಾಖಲೆಗಳನ್ನು ಸ್ವೀಕರಿಸುವುದನ್ನು ತೋರಿಸುತ್ತದೆ.

ಎಲ್ಲರಿಗೂ ನಮಸ್ಕಾರ, ಇಂದು ಎರ್ನಾಕುಲಂ ಪ್ರೆಸ್​ ಕ್ಲಬ್​ನಲ್ಲಿ ನಿಮ್ಮೆಲ್ಲರನ್ನು ಭೇಟಿಯಾಗಲು ನನಗೆ ತುಂಬಾ ಸಂತೋಷವಾಗಿದೆ. ನಿಮ್ಮೆಲ್ಲರಿಗೂ ಮುಂಚಿತವಾಗಿ ಓಣಂ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ. ಫೆಡರಲ್​ ಬ್ಯಾಂಕ್​ ದೇಶೀಯ ತಂತ್ರಜ್ಞಾನ ಅಭಿವೃದ್ಧಿಯನ್ನು ಬೆಂಬಲಿಸಲು ಯಾವಾಗಲೂ ಇರುವುದಾಗಿ ಮತ್ತೊಮ್ಮೆ ಸಾಬೀತುಪಡಿಸಿದೆ. ನಮ್ಮ ಓಣಂ ಅನ್ನು ವರ್ಣರಂಜಿತಗೊಳಿಸಿದ್ದಕ್ಕಾಗಿ ಫೆಡರಲ್​ ಬ್ಯಾಂಕ್​ಗೆ ಧನ್ಯವಾದಗಳು. ಎಲ್ಲರಿಗೂ ಧನ್ಯವಾದಗಳು ಎಂದು ರೋಬೋಟ್​ ಹೇಳುವುದು ಕೇಳಿಸುತ್ತದೆ.

ರೋಬೋಟಿಕ್ಸ್​ ಕಂಪನಿಯ ಸಿಇಒ ಜಯಕೃಷ್ಣನ್​ ಟಿ, ರೋಬೋಟ್​ ಸಾಂಪ್ರದಾಯಿಕ ಹಾಡನ್ನು ಹಾಡುವ ಕ್ಲಿಪ್​ ಅನ್ನು ಸಹ ಹಂಚಿಕೊಂಡಿದ್ದಾರೆ. ಅನೇಕ ಬಳಕೆದಾರರು ಆವಿಷ್ಕಾರವನ್ನು ಮೆಚ್ಚಿದರೆ ಕೆಲವರು ಮಾರ್ಕೆಟಿಂಗ್​ ತಂತ್ರಗಳನ್ನು ಟೀಕಿಸಿದ್ದಾರೆ.

ರೋಬೋಟ್​ಗಳ ವೀಡಿಯೊಗಳು ಸಾಮಾನ್ಯವಾಗಿ ಜಾಲತಾಣದಲ್ಲಿ ಗಮನ ಸೆಳೆಯುತ್ತವೆ. ಈ ವರ್ಷದ ಜನವರಿಯಲ್ಲಿ, ಯುವಕನೊಬ್ಬ ರೋಬೋಟ್​ನೊಂದಿಗೆ ಬ್ಯಾಡ್ಮಿಂಟನ್​ ಆಡುತ್ತಿರುವುದನ್ನು ತೋರಿಸುವ ವೀಡಿಯೊವು ವೈರಲ್​ ಆಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...