ಕಾರುಗಳ ಹಿಂಬದಿಯ ಸೀಟಿನಲ್ಲಿ ಕುಳಿತುಕೊಳ್ಳಲು ಹಿಂದಿನ ಸೀಟಿನಲ್ಲಿರುವ ಪ್ರಯಾಣಿಕರು ಸಹ ಸೀಟ್ ಬೆಲ್ಟ್ ಧರಿಸದಿದ್ದರೆ ದಂಡ ತೆರಬೇಕಾಗಬಹುದು.
ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮಂಗಳವಾರ ಈ ವಿಷಯ ಘೋಷಿಸಿದ್ದು, ಮುಂದಿನ ಮೂರು ದಿನಗಳಲ್ಲಿ ಅಧಿಸೂಚನೆ ಪ್ರಕಟಿಸಲಾಗುತ್ತದೆ ಎಂದಿದ್ದಾರೆ.
ಕಾರಿನ ಹಿಂಭಾಗದಲ್ಲಿ ಸೀಟ್ ಬೆಲ್ಟ್ಗಳನ್ನು ಬಳಸುವ ಅಗತ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಕ್ರಿಕೆಟಿಗರು ಮತ್ತು ಬಾಲಿವುಡ್ ನಟರನ್ನು ಸಹ ಬಳಸಿಕೊಳ್ಳಲಿದೆ.
ಸೆೈರಸ್ ಮಿಸ್ತ್ರಿ ರಸ್ತೆ ಅಪಘಾತದಲ್ಲಿ ಮೃತರಾದ ಬಳಿಕ ಸಚಿವರು ಈ ರೀತಿ ಕಾಮೆಂಟ್ ನೀಡಿರುವುದು ಮಹತ್ವ ಪಡೆದುಕೊಂಡಿದೆ.
ಭಾನುವಾರ ಮುಂಬೈ- ಅಹಮದಾಬಾದ್ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾದ ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಕಾರಿನ ಹಿಂಭಾಗದಲ್ಲಿದ್ದರು, ಸೀಟ್ ಬೆಲ್ಟ್ ಧರಿಸಿರಲಿಲ್ಲ.
ಡ್ರೈವರ್ ಸೀಟಿಗೆ ಇರುವಂತಹ ಬೆಲ್ಟ್ ಹಿಂಬದಿ ಸೀಟಿಗೂ ಇರಬೇಕೆಂಬ ಕುರಿತು ಅನುಷ್ಠಾನದ ಬಗ್ಗೆ ಸಚಿವಾಲಯವು ಕೆಲಸ ಮಾಡುತ್ತಿದೆ ಎಂದು ಸಚಿವ ಗಡ್ಕರಿ ಹೇಳಿದ್ದಾರೆ. ಹಾಗೆ ಎಲ್ಲಾ ಪ್ರಯಾಣಿಕರಿಗೆ ಸುರಕ್ಷಿತವಾಗಿಸಲು ಎಲ್ಲಾ ಕಾರುಗಳಲ್ಲಿ ಆರು ಏರ್ಬ್ಯಾಗ್ಗಳನ್ನು ಕಡ್ಡಾಯಗೊಳಿಸುವುದು ಎಂದಿದ್ದಾರೆ.
ಮುಖ್ಯಮಂತ್ರಿಗಳು ಕಾರು ಬೆಲ್ಟ್ ಧರಿಸದೇ ಇದ್ದದ್ದು, ತಮ್ಮ ಕಾರಿನಲ್ಲಿ ಸೀಟ್ ಬೆಲ್ಟ್ ಅಲರಾಂ ಆಫ್ ಮಾಡಿದ್ದ ಸಂಗತಿಯನ್ನೂ ಅವರು ನೆನಪಿಸಿಕೊಂಡಿದ್ದಾರೆ.