alex Certify ಚಾಲನಾ ಪರವಾನಗಿ ಪಡೆಯುವವರಿಗೆ ದೆಹಲಿ ಸರ್ಕಾರದಿಂದ ಖುಷಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಲನಾ ಪರವಾನಗಿ ಪಡೆಯುವವರಿಗೆ ದೆಹಲಿ ಸರ್ಕಾರದಿಂದ ಖುಷಿ ಸುದ್ದಿ

ಚಾಲನಾ ಪರವಾನಗಿ ಪಡೆಯೋದು ಸುಲಭವಲ್ಲ. ಚಾಲನಾ ಪರವಾನಗಿ ಪಡೆಯಲು ಏನೆಲ್ಲ ಮಾಡ್ಬೇಕೆಂಬುದು ಪರವಾನಗಿ ಪಡೆದವರಿಗೆ ಗೊತ್ತು. ಸಾಮಾನ್ಯವಾಗಿ ಭಾನುವಾರ ಚಾಲನಾ ಪರವಾನಗಿ ಪರೀಕ್ಷೆಗೆ ರಜೆ ಇರುತ್ತದೆ. ಆದ್ರೆ ಇನ್ಮುಂದೆ ಭಾನುವಾರವೂ ನೀವು ಚಾಲನಾ ಪರವಾನಗಿ ಪರೀಕ್ಷೆಯಲ್ಲಿ ಪಾಲ್ಗೊಳ್ಳಬಹುದು.

ಯಸ್, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾನುವಾರವೂ ಆರ್.ಟಿ.ಒ. ತೆರೆದಿರುತ್ತದೆ. ದೆಹಲಿ ಸರ್ಕಾರ ಈ ಬಗ್ಗೆ ಸೂಚನೆ ನೀಡಿದೆ. 13 ಪ್ರಾದೇಶಿಕ ಕಚೇರಿಗಳಲ್ಲಿ ಚಾಲನಾ ಪರೀಕ್ಷೆ ನಡೆಯಲಿದೆ. ದೆಹಲಿ ಸಾರಿಗೆ ಇಲಾಖೆಯ ಎಲ್ಲಾ 13 ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಭಾನುವಾರ ಚಾಲನಾ ಪರವಾನಗಿಗಾಗಿ ಪರೀಕ್ಷೆ ತೆಗೆದುಕೊಳ್ಳಬಹುದು. ಕೆಲಸಕ್ಕೆ ಹೋಗುವವರು ಭಾನುವಾರ ಪರೀಕ್ಷೆಯಲ್ಲಿ ಪಾಲ್ಗೊಳ್ಳಬಹುದು.

ಅರ್ಜಿದಾರರ ಅನುಕೂಲತೆವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಭಾನುವಾರ ಚಾಲನಾ ಪರವಾನಗಿ ಪರೀಕ್ಷೆಯ ಹೊರತಾಗಿ ಆರ್‌ಟಿಒದಲ್ಲಿ ಬೇರೆ ಯಾವುದೇ ಸೌಲಭ್ಯವಿರುವುದಿಲ್ಲ. ಭಾನುವಾರ ಚಾಲನಾ ಪರೀಕ್ಷೆಯನ್ನು ನೀಡಲು ಬಯಸುವವರು ಆನ್‌ಲೈನ್‌ನಲ್ಲಿ ಹೆಸರು ಕಾಯ್ದಿರಿಸಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...