ಜಿ 20 ಶೃಂಗಸಭೆಯಲ್ಲಿ ಭಾಗಿಯಾಗುವ ಸಲುವಾಗಿ ರಿಷಿ ಸುನಕ್ ದೆಹಲಿಗೆ ಆಗಮಿಸಿದ್ದು ಎಲ್ರಿಗೂ ತಿಳಿದಿರೋ ವಿಚಾರ. ಈಗಾಗಲೇ ಯುಕೆ ಪ್ರಧಾನಿ ಹಾಗೂ ಕರ್ನಾಟಕದ ಅಳಿಯ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಈ ಎಲ್ಲದರ ನಡುವೆ ಬೋಟ್ ಕಂಪನಿ ಸಿಇಓ ಹಾಗೂ ಸಹ ಸಂಸ್ಥಾಪಕ ಅಮನ್ ಗುಪ್ತಾ ಇನ್ಸ್ಟಾಗ್ರಾಂನಲ್ಲಿ ರಿಷಿ ಸುನಕ್ರ ಫೋಟೋ ಶೇರ್ ಮಾಡಿದ್ದಾರೆ. ಇದರಲ್ಲಿ ರಿಷಿ ಸುನಕ್ ಬೋಟ್ ಕಂಪನಿಯ ಹೆಡ್ಫೋನ್ ಧರಿಸಿರೋದನ್ನ ಕಾಣಬಹುದಾಗಿದೆ. ಈ ಫೋಟೋದಲ್ಲಿ ರಿಷಿ ಸುನಕ್ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ.
ಈ ಫೋಟೋವನ್ನು ಮೊದಲು ರಿಷಿ ಸುನಕ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಾದ ಬಳಿಕ ಅಮನ್ಗುಪ್ತಾ ಕೂಡ ತಮ್ಮ ಖಾತೆಯಲ್ಲಿ ಈ ಫೋಟೋ ಶೇರ್ ಮಾಡಿದ್ದಾರೆ. ಈ ಫೋಟೋಗೆ ಅಮನ್ ಗುಪ್ತಾ, ಭಾರತ್ ಮೇ ಆಪ್ ಕಾ ಬೋಟ್ ಬೋಟ್ ಸ್ವಾಗತ್ (ಭಾರತಕ್ಕೆ ನಿಮಗೆ ಸ್ವಾಗತ) ಎಂದು ಬರೆದಿದ್ದಾರೆ.
ಈ ಫೋಟೋ ನೋಡಿದ ನೆಟ್ಟಿಗರು ಬೋಟ್ ಕಂಪನಿಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪುಕ್ಸಟ್ಟೆ ಪ್ರಮೋಷನ್ ಕೊಟ್ಟರು ಎಂದು ನಕ್ಕಿದ್ದಾರೆ. ಇನ್ನು ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ಶುಕ್ರವಾರ ಸರಳವಾದ ಭೋಜನಕೂಟದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.