ಇದು ರಿಪ್ಡ್ ಜೀನ್ಸ್ ಗಳ ಜಮಾನ. ಸ್ಟೈಲ್ ಆಗಿ ಕಾಣಿಸಿಕೊಳ್ಳಬೇಕು ಎಂಬ ಹಠಕ್ಕೆ ಬಿದ್ದು ಕೈಗೆ ಸಿಕ್ಕ ಜೀನ್ಸ್ ಗಳನ್ನೆಲ್ಲಾ ಅರ್ಧಕ್ಕೆ ಹರಿದು ಹಾಕಿಕೊಳ್ಳಬೇಕಿಲ್ಲ. ರಿಪ್ಡ್ ಜೀನ್ಸ್ ಗೆ ಹಳೆಯ ಪ್ಯಾಂಟ್ ಆಯ್ದುಕೊಳ್ಳುವುದೇ ಒಳ್ಳೆಯದು.
ಇದಕ್ಕಾಗಿ ಬ್ಲೇಡ್, ಫ್ಯಾಬ್ರಿಕ್ ಕತ್ತರಿ, ಕಡಿಮೆ ಅಂಚಿನ ಚಾಕುಗಳನ್ನು ತೆಗೆದುಕೊಳ್ಳಿ. ದಾರಗಳನ್ನು ಎಳೆಯಲು ಪ್ಲಕ್ಕರ್ ಬಳಸಿ. ನಿಮ್ಮ ರಿಪ್ಡ್ ಜೀನ್ಸ್ ಹೇಗೆ ಇರಬೇಕು ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಿ. ಬಳಿಕ ಕತ್ತರಿಸಬೇಕಾದ ಜಾಗವನ್ನು ಮಾರ್ಕ್ ಮಾಡಿ.
ವೈಡ್ ಬಾಲ್ ತೀರ್ಪು ನೀಡಲು ವಿಚಿತ್ರ ವಿಧಾನ ಅನುಸರಿಸಿದ ಅಂಪೈರ್
ಆ ಭಾಗವನ್ನು ತೆಳುವಾಗಿ ಕಟ್ ಮಾಡಿ. ಪ್ಲಕ್ಕರ್ ನೆರವಿನಿಂದ ಥ್ರೆಡ್ ಗಳನ್ನು ಎಳೆಯಿರಿ. ಬಳಿಕ ಸ್ಯಾಂಡ್ ಪೇಪರ್ ನಿಂದ ಉಜ್ಜಿ. ಇದು ನಿಮ್ಮ ಜೀನ್ಸ್ ಗೆ ವಿಭಿನ್ನ ಲುಕ್ ನೀಡುತ್ತದೆ.
ಯಾವುದೇ ಕಾರಣಕ್ಕೆ ಜೀನ್ಸ್ ಅನ್ನು ಕತ್ತರಿಯಿಂದ ಕತ್ತರಿಸದಿರಿ. ಇದರಿಂದ ಜೀನ್ಸ್ ಪೂರ್ತಿ ಹರಿದು ಹೋಗಬಹುದು. ಪ್ಯಾಂಟ್ ಅನ್ನು ಎಳೆಯುವ, ತುಂಡರಿಸುವ ತಪ್ಪು ಮಾಡದಿರಿ. ಮೊಣಕಾಲುಗಳ ಬಳಿ ರಿಪ್ಡ್ ಬರುವಂತೆ ನೋಡಿಕೊಂಡರೆ ಆಕರ್ಷಣೆಯೂ ಹೆಚ್ಚು.