alex Certify ಕಂದಾಯ ಇಲಾಖೆ: ವಿವಿಧ ಹುದ್ದೆಗಳಿಗೆ ಹೊರಗುತ್ತಿಗೆ ನೇಮಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಂದಾಯ ಇಲಾಖೆ: ವಿವಿಧ ಹುದ್ದೆಗಳಿಗೆ ಹೊರಗುತ್ತಿಗೆ ನೇಮಕ

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿನ ಕಂದಾಯ ಕಚೇರಿಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರ(ಸ್ಟೆನೋ), ಬೆರಳಚ್ಚುಗಾರರು(ಡಾಟಾ ಎಂಟ್ರಿ ಆಪರೇಟರ್), ಡಿ-ಗ್ರೂಪ್, ಸೆಕ್ಯೂರಿಟಿ ಗಾರ್ಡ್ಸ್ಸ್, ಸ್ವಚ್ಛತಾ ಸಿಬ್ಬಂದಿಗಳು, ಗಾರ್ಡನರ್ಸ್, ಲಿಫ್ಟ್ ಆಪರೇಟರ್ ಸೇರಿದಂತೆ ಒಟ್ಟು 54  ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಲು ಉದ್ದೇಶಿಸಲಾಗಿದ್ದು, ಆಸಕ್ತ ಗುತ್ತಿಗೆದಾರರಿಂದ ಇ-ಪ್ರೊಕ್ಯೂರ್‍ಮೆಂಟ್ ಪೋರ್ಟಲ್ ಮೂಲಕ ಟೆಂಡರ್ ಆಹ್ವಾನಿಸಲಾಗಿದೆ.

ಇಎಂಡಿ ಮೊತ್ತ 1.50 ಲಕ್ಷ ರೂ., ಆಸಕ್ತರು ನಿಯಮಾನುಸಾರ ಶುಲ್ಕ ಪಾವತಿಸಿ ಟೆಂಡರ್ ಅರ್ಜಿಯನ್ನು ಏ. 30 ರಂದು ಸಂಜೆ 5.30 ರ ಒಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಯನ್ನು https://eproc.karnataka.gov.in ನಲ್ಲಿ ಅಥವಾ ಕಚೇರಿ ಆಡಳಿತ ಶಾಖೆಯಲ್ಲಿ ಪಡೆಯಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...