![Revenge for marital rift': 6-year-old killed in Gurugram | Gurgaon News - Times of India](https://static.toiimg.com/thumb/msid-84722943,width-1200,height-900,resizemode-4/.jpg)
ವ್ಯಕ್ತಿಯೊಬ್ಬ ತನ್ನ ವೈವಾಹಿಕ ಜೀವನದಲ್ಲಿ ಉಂಟಾದ ಬಿರುಕಿನಿಂದ ಸಿಟ್ಟಿಗೆದ್ದು ಆರು ವರ್ಷದ ಬಾಲಕನನ್ನು ಅಪಹರಿಸಿ ಕೊಂದುಹಾಕಿದ ಘಟನೆಯೊಂದು ಗುರುಗ್ರಾಮ ಬಳಿ ನಡೆದಿದೆ.
ಮೂಲತಃ ಬಿಹಾರದ ಸಮಸ್ತಿಪುರದ 30 ವರ್ಷದ ಗುಡ್ಡು ಕುಮಾರ್ ತನ್ನ ಹೆಂಡತಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ದಿನಗೂಲಿಯಾಗಿ ಕೆಲಸ ಮಾಡುತ್ತಿದ್ದ. ಪತಿ ಪತ್ನಿ ನಡುವೆ ಆಗಾಗ್ಗೆ ಕಲಹ ನಡೆಯುತ್ತಿತ್ತು. ನೆರೆ ಮನೆಯಲ್ಲಿದ್ದ ಪತ್ನಿಯ ಚಿಕ್ಕಮ್ಮ ಜಗಳ ಬಿಡಿಸಲು ಪ್ರಯತ್ನಿಸುತ್ತಿದ್ದರು. ಆದರೆ ಹೆಂಡತಿಯ ಚಿಕ್ಕಮ್ಮ ತನ್ನ ಕುಟುಂಬದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಆತ ಕೋಪಗೊಂಡಿದ್ದ.
ಜೂನ್‌ನಲ್ಲಿ ಇವರಿಬ್ಬರ ಜಗಳ ಪರಿಹರಿಸಲು ಆತನ ಅತ್ತೆ-ಮಾವ ಮನೆಗೆ ಆಗಮಿಸಿ ಸಲಹೆ ನೀಡಿದ್ದರು, ಸಮಸ್ಯೆ ಬಗೆಹರಿಯದೆ ಪತ್ನಿ ಹೆತ್ತವರ ಮನೆ ಪಾಣಿಪತ್‌ಗೆ ಮರಳಿದ್ದರು. ಪತ್ನಿ ತನ್ನಿಂದ ದೂರಾಗಲು ಆಕೆಯ ಚಿಕ್ಕಮ್ಮ ಕಾರಣ ಎಂದು ಗುಡ್ಡು ಕೋಪಗೊಂಡಿದ್ದ.
ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಅಂಚೆ ಇಲಾಖೆಯಲ್ಲಿ 2357 ಹುದ್ದೆಗಳಿಗೆ ಅರ್ಜಿ ಆಹ್ವಾನ
ಜುಲೈ 22ರಂದು, ತನ್ನ ನೆರೆ ಮನೆಯಲ್ಲಿ ವಾಸವಾಗಿದ್ದ ಪತ್ನಿಯ ಚಿಕ್ಕಮ್ಮನ ಆರು ವರ್ಷದ ಮಗ ಮನೆ ಹೊರಗೆ ಆಡುತ್ತಿದ್ದಾಗ ಗುಡ್ಡುಕುಮಾರ್ ಅಪಹರಿಸಿದ್ದ. ಬಳಿಕ ಕತ್ತು ಹಿಸುಕಿ ಕೊಂದು, ಮುಖವನ್ನು ಇಟ್ಟಿಗೆಗಳಿಂದ ಚಚ್ಚಿ ದೇಹವನ್ನು ಪೊದೆಯಲ್ಲಿ ಬಚ್ಚಿಟ್ಟಿದ್ದ. ಪೊಲಿಸರ ತನಿಖೆಯಿಂದ ಈ ಸಂಗತಿ ಬಯಲಾಗಿದೆ.
ಹ್ಯೂಮನ್ ಇಂಟಲಿಜೆನ್ಸ್, ಟೆಕ್ನಿಕಲ್ ಸರ್ವಲೆನ್ಸ್ ಬಳಸಿ ಗುಡ್ಡುಕುಮಾರ್‌ನನ್ನು ವಿಚಾರಣೆ ನಡೆಸಿದ ಕ್ರೈಂ ಪೊಲೀಸರಿಗೆ ಸತ್ಯ ಗೊತ್ತಾಯಿತು.
ಆರೋಪಿಯನ್ನು ಬಂಧಿಸಿದ ನಂತರ ಬಾಲಕನ ಶವವನ್ನು ಶನಿವಾರ ವಶಪಡಿಸಿಕೊಳ್ಳಲಾಗಿದೆ.