ಅನುಕರಣೀಯ ನಿದರ್ಶನವೊಂದರಲ್ಲಿ; ತಮ್ಮ ಪಿಂಚಣಿಯ ಅಷ್ಟೂ ಉಳಿತಾಯದ ಹಣವನ್ನು ಆಸ್ಪತ್ರೆಯೊಂದಕ್ಕೆ ಮಿನಿ ವೆಂಟಿಲೇಟರ್‌ಗಳು ಹಾಗೂ ಇತರೆ ಉಪಕರಣಗಳನ್ನು ಖರೀದಿಸಿ ಕೊಡಲು ಪುಸ್ರಮ್ ಸಿನ್ಹಾ ಹೆಸರಿನ 70 ವರ್ಷದ ನಿವೃತ್ತ ನೌಕರರೊಬ್ಬರು ಮುಂದಾಗಿದ್ದಾರೆ.
ಶಿಕ್ಷಕರಾಗಿ ಕೆಲಸ ಮಾಡಿ ನಿವೃತ್ತ ಜೀವನ ಸಾಗಿಸುತ್ತಿರುವ ಸಿನ್ಹಾ ತಮ್ಮ ಬ್ಯಾಂಕ್ ಖಾತೆಯಿಂದ 3.5 ಲಕ್ಷ ರೂ.ಗಳನ್ನು ಹಿಂಪಡೆದು, ಛತ್ತೀಸ್‌ಗಡದ ಬೆಮೆತಾರಾ ಜಿಲ್ಲೆಯ ಬೆರ್ಲಾ ಎಂಬ ಊರಿನ ಸರ್ಕಾರೀ ಆಸ್ಪತ್ರೆಗೆ ವೈದ್ಯಕೀಯ ಸಲಕರಣೆಗಳನ್ನು ಖರೀದಿಸಿಕೊಟ್ಟಿದ್ದಾರೆ.
“ನಾನು ನನ್ನ ಜೀವನವನ್ನು ಜೀವಿಸಿದ್ದೇನೆ, ಈಗ ಬ್ಯಾಂಕ್‌ನಲ್ಲಿರುವ ಪಿಂಚಣಿ ಹಣವನ್ನು ಇಟ್ಟುಕೊಂಡು ಏನು ಮಾಡುವುದು..? ಜೀವಗಳನ್ನು ಉಳಿಸಲು ಪಿಂಚಣಿ ಹಣವನ್ನು ಬಳಕೆ ಮಾಡುವುದಕ್ಕಿಂತ ಉತ್ತಮವಾದ ಮತ್ತೊಂದು ಆಯ್ಕೆ ಇಲ್ಲ” ಎಂದು ಸಿನ್ಹಾ ತಿಳಿಸಿದ್ದಾರೆ. ತಮ್ಮ ಹೆತ್ತವರ ನೆನಪಿನಲ್ಲಿ ಸಿನ್ಹಾ ಆಸ್ಪತ್ರೆಗೆ ಈ ಉಪಕರಣಗಳನ್ನು ಕೊಡಿಸಿದ್ದಾರೆ.