alex Certify ಪರೀಕ್ಷೆ ಮುಗಿದ ಕೇವಲ 48 ಗಂಟೆಯೊಳಗೆ ಫಲಿತಾಂಶ ಪ್ರಕಟಿಸಿದ ಕುವೆಂಪು ವಿವಿ ಹೊಸ ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರೀಕ್ಷೆ ಮುಗಿದ ಕೇವಲ 48 ಗಂಟೆಯೊಳಗೆ ಫಲಿತಾಂಶ ಪ್ರಕಟಿಸಿದ ಕುವೆಂಪು ವಿವಿ ಹೊಸ ದಾಖಲೆ

ಶಿವಮೊಗ್ಗ: ಪರೀಕ್ಷೆ ಮುಗಿದ ಕೇವಲ 48 ಗಂಟೆಯೊಳಗೆ ಫಲಿತಾಂಶ ಪ್ರಕಟಿಸುವ ಮೂಲಕ ಕುವೆಂಪು ವಿವಿ ಹೊಸ ಶೈಕ್ಷಣಿಕ ದಾಖಲೆ ಬರೆದಿದೆ.

ಬಿಸಿಎ ಪದವಿಯ 5 ಮತ್ತು 6ನೇ ಸೆಮಿಸ್ಟರ್ ಗಳಿಗೆ ಸೆಪ್ಟೆಂಬರ್ 12ರಂದು ಪರೀಕ್ಷೆ ನಡೆದಿದ್ದು, ಕುವೆಂಪು ವಿವಿ ಸೆಪ್ಟೆಂಬರ್ 14ರಂದು ಫಲಿತಾಂಶ ಪ್ರಕಟಿಸಿದೆ. ಶೀಘ್ರ ಮೌಲ್ಯಮಾಪನಕ್ಕೆ ಹೆಸರಾದ ಕುವೆಂಪು ವಿವಿ ಈ ಹಿಂದೆಯೂ ಶೀಘ್ರವಾಗಿ ಫಲಿತಾಂಶ ನೀಡಿ ವಿದ್ಯಾರ್ಥಿಗಳಿಗೆ ನೆರವಾಗಿದೆ.

ಪ್ರಸ್ತುತ ನಾನ್ ಎನ್ಇಪಿ ಬ್ಯಾಚ್ ನ ಬಿಸಿಎ ಪದವಿಯ 5 ಮತ್ತು 6ನೇ ಸೆಮಿಸ್ಟರ್ ಗಳ ಪರೀಕ್ಷೆ ಮುಕ್ತಾಯವಾದ ಎರಡು ದಿನದೊಳಗೆ ಫಲಿತಾಂಶ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳ ಪೋರ್ಟಲ್ ನಲ್ಲಿಯೂ ಫಲಿತಾಂಶ ಲಭ್ಯವಿದೆ. ಅವರ ಮೊಬೈಲ್ ಸಂಖ್ಯೆಗೆ ಮೆಸೇಜ್ ಮೂಲಕ ಫಲಿತಾಂಶ ತಲುಪಿಸಲಾಗಿದೆ.

ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್.ಎಂ. ಗೋಪಿನಾಥ್ ಅವರು ಶೀಘ್ರ ಫಲಿತಾಂಶ ಪ್ರಕಟಣೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಫಲಿತಾಂಶ ಪ್ರಕಟಿಸಲು ಕುವೆಂಪು ವಿವಿ ಪರೀಕ್ಷಾಂಗ ಸಿಬ್ಬಂದಿ, ಬೋಧಕ ವರ್ಗ ಶ್ರಮಿಸಿದೆ. ಅವರ ಸಹಕಾರದಿಂದ ಬೇಗನೆ ಫಲಿತಾಂಶ ನೀಡಿ ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗ ಮತ್ತು ಉದ್ಯೋಗಕ್ಕೆ ಅನುಕೂಲವಾಗುವಂತೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...