ದೇಶದ ಮೊದಲ ಸೋಲಾರ್ ಗ್ರಾಮವಾದ ಮಧ್ಯ ಪ್ರದೇಶದ ಬಚಾಗೆ ರಾಜ್ಯಪಾಲ ಮಾಂಗುಭಾಯ್ ಸಿ ಪಟೇಲ್ ಭೇಟಿ ಕೊಟ್ಟು ಅಲ್ಲಿನ ಬುಡಕಟ್ಟು ಕುಟುಂಬವೊಂದರ ಜೊತೆಗೆ ಭೋಜನ ಸವಿದು ಬಂದಿದ್ದರು.
ಈ ಊರಿನಲ್ಲಿ 74 ಮನೆಗಳಿದ್ದು, ಪ್ರತಿಯೊಂದು ಮನೆಯೂ ಸೋಲಾರ್ ಫಲಕ, ಬ್ಯಾಟರಿ ಹಾಗೂ ಒಲೆಗಳನ್ನು ಹೊಂದಿದ್ದು, ಯಾವುದೇ ಮನೆಯಲ್ಲಿ ಅಡುಗೆ ಮಾಡಲು ಸೌದೆ/ಗ್ಯಾಸ್ ಒಲೆಗಳನ್ನು ಬಳಸುವುದಿಲ್ಲ.
ಐಐಟಿ-ಬಾಂಬೆ ಹಾಗೂ ಒಎನ್‌ಜಿಸಿ ಜಂಟಿ ಸಹಯೋಗದಲ್ಲಿ ವಿದ್ಯಾ ಭಾರತಿ ಸಂಸ್ಥೆಯು ಎರಡು ವರ್ಷಗಳ ಹಿಂದೆ ಈ ಕುಗ್ರಾಮಕ್ಕೆ ಭರ್ಜರಿ ಮಾರ್ಪಾಡು ಮಾಡಿದೆ. 2017ರಲ್ಲಿ ಈ ಊರನ್ನು ಸೋಲಾರ್ ಗ್ರಾಮವನ್ನಾಗಿ ಮಾಡಲು ನಿರ್ಧರಿಸಿದ ವಿದ್ಯಾ ಭಾರತಿ, 2019ರಲ್ಲಿ ಸಂಪೂರ್ಣ ಸೋಲಾರ್ ಗ್ರಾಮವನ್ನಾಗಿ ಬಚಾವನ್ನು ಬದಲಿಸಿದೆ.
ಇಂಗುಗುಂಡಿಗಳ ನಿರ್ಮಾಣದಿಂದಾಗಿ ಈ ಊರಿನಲ್ಲಿ ಬೇಸಿಗೆ ಕಾಲದಲ್ಲೂ ಸಹ ನೀರಿನ ಅಭಾವ ಇಲ್ಲದಂತಾಗಿದೆ. ಸಣ್ಣ ಪುಟ್ಟ ನದಿಗಳಿಗೆ ಪುಟ್ಟ ತಡೆಅಣೆಕಟ್ಟು ನಿರ್ಮಾಣದ ಮೂಲಕ ಕೃಷಿ ಚಟುವಟಿಕೆಗಳಿಗೆ ಸದಾ ನೀರು ಲಭ್ಯವಿರುವಂತೆ ನೋಡಿಕೊಂಡಿದ್ದಾರೆ ಗ್ರಾಮಸ್ಥರು.