ಆಸ್ಟ್ರೇಲಿಯಾದ ಮ್ಯಾಂಗ್ರೋವ್ ಕಾಡಿನಲ್ಲಿ ವಿಚಿತ್ರವಾದ ಗೊಂಬೆಯೊಂದು ಪತ್ತೆಯಾಗಿದ್ದು, ಇದನ್ನ ನೋಡಿದ ಸ್ಥಳೀಯ ನಿವಾಸಿಗಳು ಶಾಕ್ ಆಗಿದ್ದಾರೆ.
ಉತ್ತರ ಕ್ವೀನ್ಸ್ ಲ್ಯಾಂಡ್ನಲ್ಲಿ ಕೇವಲ 406 ಮಂದಿ ಮಾತ್ರ ವಾಸವಿದ್ದಾರೆ. ಇವರಿಗೆಲ್ಲ ಈ ರೀತಿಯ ಗೊಂಬೆಗಳು ಹಾಗೂ ಅದರಿಂದಾಗುವ ಅಪಶಕುನಗಳ ಬಗ್ಗೆ ಮಾಹಿತಿ ಇದೆ. ಇವು ಮೀನುಗಾರಿಕೆ ವಿಫಲ ಮಾಡಿಸುತ್ತವೆ ಎಂಬ ನಂಬಿಕೆಯೂ ಸ್ಥಳೀಯರಲ್ಲಿದೆ. ಆದರೂ ಸಹ ಯಾರೊಬ್ಬರೂ ಈ ಗೊಂಬೆಯನ್ನ ಮುಟ್ಟೋದಕ್ಕಾಗಿ ಅಥವಾ ಅದರ ಬಗ್ಗೆ ವಿಚಾರಿಸುವ ಗೋಜಿಗಾಗಿ ಹೋಗಿಲ್ಲ.
ಇಲ್ಲಿರುವ ಎಲ್ಲರಿಗೂ ಗೊಂಬೆಯ ಬಗ್ಗೆ ತಿಳಿದಿದೆ ಎನಿಸುತ್ತೆ ಆದರೆ ಯಾರೂ ಅದರ ಬಗ್ಗೆ ಮಾತನಾಡಲು ಇಚ್ಚಿಸುತ್ತಿಲ್ಲ ಎಂದು ಸ್ಥಳೀಯ ಸಂಸದ ನಿಕ್ ಡ್ಯಾಮೆಟ್ಟೋ ಹೇಳಿದ್ದಾರೆ.
ಗೊಂಬೆಯ ವಿಚಾರವಾಗಿ ತಿಳಿದಿರುವ ವಿಚಾರಗಳಿಗಿಂತ ಗೊಂದಲಗಳೇ ಹೆಚ್ಚಾಗಿದೆ. ಆದರೆ ಗೊಂಬೆಯನ್ನ ಈ ರೀತಿ ಜೋಕಾಲಿಯ ಮೇಲೆ ದಂಪತಿಯೊಬ್ಬರು ಕೂರಿಸಿದ್ದಾರೆ ಎಂದು ಉದ್ಯಮಿಯೊಬ್ಬರು ಮಾಹಿತಿ ನೀಡಿದ್ದಾರೆ.