ಮಧ್ಯರಾತ್ರಿ ಸುಮಾರಿಗೆ ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದ 24 ದಿನದ ಮಗುವಿಗೆ ಸಹಾಯ ಮಾಡಲು ಮಧ್ಯಪ್ರದೇಶದ ಭೋಪಾಲ್ ನಿವಾಸಿಗಳು ಮುಂದಾಗಿದ್ದಾರೆ.
ರಾಜಧಾನಿ ಎಕ್ಸ್ಪ್ರೆಸ್ನಲ್ಲಿ ನಾಗ್ಪುರದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಶಿಶು ಕೃತಕ ಆಮ್ಲಜನಕದ ಮೇಲೆ ಉಸಿರಾಡುತ್ತಿತ್ತು. ಆದರೆ ಮಾರ್ಗ ಮಧ್ಯದಲ್ಲಿ ರೈಲಿನಲ್ಲಿ ಕೃತಕ ಆಮ್ಲಜನಕದ ಕೊರತೆಯಿದೆ ಎಂದು ತಿಳಿದುಬಂದಿದೆ.
BIG NEWS: ಮಗಳು ಮೃತಪಟ್ರೂ ಆಕೆಯ ತಂದೆಯ ಆಸ್ತಿಯಲ್ಲಿ ಪತಿ, ಮಕ್ಕಳಿಗೆ ಹಕ್ಕಿದೆ: ದೆಹಲಿ ಕೋರ್ಟ್ ಮಹತ್ವದ ಆದೇಶ
ಶಿಶುವಿನ ಪೋಷಕರು ಮಧ್ಯರಾತ್ರಿ ಎಸ್ಒಎಸ್ ಸಂದೇಶವನ್ನು ಕಳುಹಿಸಿದ್ದಾರೆ. ಕೆಲವೇ ಗಂಟೆಗಳಲ್ಲಿ ಈ ಸಂದೇಶ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬೆಳಗ್ಗಿನ ಜಾವ 2 ಗಂಟೆ ಸುಮಾರಿಗೆ ರೈಲು ಭೋಪಾಲ್ನ ರೈಲು ನಿಲ್ದಾಣವನ್ನು ತಲುಪುವ ವೇಳೆಗೆ ವೈದ್ಯರು, ಎನ್ಜಿಓಗಳು, ರೈಲು ಅಧಿಕಾರಿಗಳು ಹಾಗೂ ಸಾಮಾನ್ಯ ನಾಗರಿಕರು ಆಮ್ಲಜನಕ ಸಿಲಿಂಡರ್ ಸಮೇತ ಸರತಿಯಲ್ಲಿ ನಿಂತಿದ್ದರು.
ಮಗುವಿನ ತಂದೆ ಪ್ರವೀಣ್ ಸಹಾರೆ ಭೋಪಾಲ್ನ ಕೆಲವು ಸಂಸ್ಥೆಗಳ ಬಳಿ ಈ ಬಗ್ಗೆ ಮನವಿ ಮಾಡಿದ್ದರು. ನಾಗ್ಪುರದಲ್ಲಿರುವ ಪ್ರವೀಣ್ ಸಹಾರೆ ಸ್ನೇಹಿತ ಖಶ್ರು ಯೋಚಾ ಆಮ್ಲಜನಕದ ಅಗತ್ಯತೆ ಬಗ್ಗೆ ಪೋಸ್ಟ್ ಮಾಡಿದ್ದಾರೆ. ರೈಲ್ವೆ ಅಧಿಕಾರಿಗಳಿಗೂ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದರು.