ವಾಯಮಾಲಿನ್ಯವು ಮೆದುಳಿನಲ್ಲಿ ಉರಿಯೂತವನ್ನು ಉಂಟು ಮಾಡೋದ್ರಿಂದ ವೀರ್ಯ ಸಂಖ್ಯೆಯು ಹೇಗೆ ಕಡಿಮೆಯಾಗುತ್ತದೆ ಎಂಬುದನ್ನು ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ನ ಸಂಶೋಧಕರು ತೋರಿಸಿಕೊಟ್ಟಿದ್ದಾರೆ. ಈ ಅಧ್ಯಯನದ ವರದಿಯನ್ನು ಎನ್ವಿರಾನ್ಮೆಂಟಲ್ ಹೆಲ್ತ್ ಪರ್ಸ್ಪೆಕ್ಟಿವ್ಸ್’ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.
ಮೆದುಳಿಗೂ ಹಾಗೂ ಸಂತಾನೋತ್ಪತ್ತಿ ಅಂಗಗಳಿಗೂ ಸಂಬಂಧ ಇದೆ ಅನ್ನೋದನ್ನು ವಿಜ್ಞಾನಿಗಳು ಈಗಾಗಲೇ ಸಾಬೀತುಪಡಿಸಿದ್ದಾರೆ. ಉದಾಹರಣೆಗೆ ಒತ್ತಡದ ಪರಿಸ್ಥಿತಿಯಲ್ಲಿ ಮಹಿಳೆಯ ಮುಟ್ಟಿನ ಅವಧಿಯಲ್ಲಿ ಏರುಪೇರು ಉಂಟಾಗುತ್ತದೆ. ಅದೇ ರೀತಿ ಈ ಅಧ್ಯಯನದಲ್ಲಿ ಕಲುಷಿತ ಗಾಳಿಯನ್ನು ಉಸಿರಾಡೋದ್ರಿಂದ ಪುರುಷರಲ್ಲಿ ವೀರ್ಯದ ಉತ್ಪತ್ತಿಯಲ್ಲಿ ಕುಂಠಿತ ಉಂಟಾಗುತ್ತದೆ ಎಂಬುದನ್ನು ತಿಳಿಸಿದ್ದಾರೆ.
ಇಲಿಗಳ ಮೆದುಳಿನಿಂದ ಒಂದೇ ಒಂದು ಪ್ರತಿಬಂಧಕವನ್ನು ತೆಗೆದು ಹಾಕಿದ ಬಳಿಕ ವಾಯು ಮಾಲಿನ್ಯದಿಂದ ಕನಿಷ್ಟ 1 ವೀರ್ಯದ ಸಂಖ್ಯೆಯಲ್ಲಿ ಕುಂಠಿತ ಕಂಡಿದ್ದನ್ನು ನಾವು ಗಮನಿಸಿದ್ದೇವೆ. ಈ ಅಧ್ಯಯನದಿಂದಾಗಿ ನಾವು ಮುಂದಿನ ದಿನಗಳಲ್ಲಿ ವಾಯುಮಾಲಿನ್ಯದಿಂದ ಸಂತಾನೋತ್ಪತ್ತಿ ಅಂಗಗಳ ಮೇಲೆ ಆಗುತ್ತಿರುವ ಪರಿಣಾಮಗಳ ವಿರುದ್ಧ ಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗುತ್ತದೆ ಎಂದು ಈ ಅಧ್ಯಯನದ ಪ್ರಧಾನ ಲೇಖಕ ಝೇಕಾಂಗ್ ಯಿಂಗ್ ಹೇಳಿದ್ರು.
ಸೆಪ್ಟೆಂಬರ್ನಲ್ಲಿ ಪ್ರಕಟಿಸಲಾದ ಪ್ರಸ್ತುತ ಅಧ್ಯಯನದಲ್ಲಿ ವಾಯುಮಾಲಿನ್ಯದಿಂದ ವೀರ್ಯದ ಸಂಖ್ಯೆಯಲ್ಲಿ ಹೇಗೆ ಕುಂಠಿತ ಕಂಡುಬಂದಿದೆ ಎಂಬುದನ್ನು ಪತ್ತೆ ಹಚ್ಚಿದೆ.
ವೀರ್ಯ ಎಣಿಕೆಗಳನ್ನು ಪರೀಕ್ಷಿಸುವ ಮೊದಲು ಆರೋಗ್ಯಕರ ಹಾಗೂ ಐಕೆಕೆ2 ರೂಪಾಂತರಿತ ಇಲಿಗಳ ಮೇಲೆ ಕಲುಷಿತ ವಾಯುವಿನ ಪರಿಣಾಮವನ್ನು ಅಧ್ಯಯನ ಮಾಡಲಾಗಿತ್ತು.