alex Certify ತೂಕ ಇಳಿಸಿಕೊಳ್ಳಲು ನೆರವಾಗುತ್ತೆ ವಿಶಿಷ್ಟ ಡಿವೈಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ಇಳಿಸಿಕೊಳ್ಳಲು ನೆರವಾಗುತ್ತೆ ವಿಶಿಷ್ಟ ಡಿವೈಸ್

ಉಪಹಾರಕ್ಕೆ ಫಾಸ್ಟ್‌ ಫುಡ್‌ನಿಂದ ಮಧ್ಯರಾತ್ರಿಯ ಕುರುಕಲಿನವರೆಗೂ, ನಿಮ್ಮ ಆರೋಗ್ಯ ಹಾಳು ಮಾಡಬಲ್ಲ ತಿನಿಸುಗಳು ನಿಮ್ಮ ಸೊಂಟದ ಗಾತ್ರವನ್ನು ಎಕ್ಕುಡಿಸಬಲ್ಲವು.

ಅದರಲ್ಲೂ ಕೋವಿಡ್-19 ಲಾಕ್‌ಡೌನ್‌ನಿಂದ ಮನೆಯಲ್ಲೇ ಇರುವ ಕಾರಣ ಜನರಲ್ಲಿ ಕುರುಕಲು ತಿನ್ನುವ ಬಯಕೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ.

ಇದಕ್ಕೆ ಬ್ರೇಕ್ ಹಾಕಲೆಂದು, ಬಾಯಿ ಚಪಲವನ್ನು ನಿಯಂತ್ರಿಸಬಲ್ಲ ವಿಶಿಷ್ಟ ಡಿವೈಸ್ ಒಂದನ್ನು ಅಭಿವೃದ್ಧಿಪಡಿಸಲಾಗಿದೆ. ಈ ಡಿವೈಸ್‌ನಲ್ಲಿ ಎರಡು ಮ್ಯಾಗ್ನೆಟ್‌ಗಳಿದ್ದು, ಒಂದಕ್ಕೊಂದು ವಿರುದ್ಧವಾಗಿ ಅಳವಡಿಸಲಾಗುತ್ತದೆ.

ಮಹಿಳೆಯರಿಗೆ ಗುಡ್ ನ್ಯೂಸ್: ಆಸ್ತಿ ನೋಂದಣಿಗೆ ಜಂಟಿ ಖಾತೆಗೆ ಸರ್ಕಾರದ ಮಹತ್ವದ ಚಿಂತನೆ

ಡೆಂಟಲ್‌ಸ್ಲಿಮ್ ಡಯೆಟ್ ಕಂಟ್ರೋಲ್ ಹೆಸರಿನ ಈ ಡಿವೈಸ್ ಆಕ್ಟಿವೇಟ್ ಮಾಡಿದ ಮೇಲೆ ವ್ಯಕ್ತಿಯ ಬಾಯನ್ನು ಮುಚ್ಚಿಸಬಲ್ಲದು. ನ್ಯೂಜಿಲೆಂಡ್‌ ಒಟ್ಯಾಗೋ ವಿವಿ ಹಾಗೂ ಲೀಡ್ಸ್‌ನ ವಿಜ್ಞಾನಿಗಳ ತಂಡವೊಂದು ಈ ಡಿವೈಸ್ ಅಭಿವೃದ್ಧಿಪಡಿಸಿದೆ.

18,000 ರೂ.ಗೆ ದೈತ್ಯ ಶಂಖದ ಹುಳು ಹರಾಜು

ಏಳು ಮಹಿಳೆಯರ ಮೇಲೆ ಈ ಡಿವೈಸ್‌ ಹೇಗೆ ಕೆಲಸ ಮಾಡುತ್ತದೆ ಎಂದು ಪ್ರಯೋಗ ಮಾಡಲಾಗಿದೆ. ಈ ಡಿವೈಸ್ ಹಾಕಿಕೊಂಡಿದ್ದ ಕಾರಣ ಈ ಮಹಿಳೆಯರೆಲ್ಲಾ ದ್ರವಾಹಾರದ ಪಥ್ಯದಲ್ಲಿ ಇರಬೇಕಾಗಿತ್ತು. ಪ್ರಯೋಗದ ಅಂತ್ಯಕ್ಕೆ ಆ ಮಹಿಳೆಯದ ದೇಹ ತೂಕದಲ್ಲಿ 5.1%ರಷ್ಟು ಇಳಿಕೆ ಕಂಡುಬಂದಿತ್ತು.

ಆದರೆ ಈ ಡಿವೈಸ್ ಧರಿಸಿದ ಸಂದರ್ಭದಲ್ಲಿ ಮಾತನಾಡಲು ಸಾಧ್ಯವಾಗದೇ ಇದ್ದ ಕಾರಣ ಮಹಿಳೆಯರಿಗೆ ಭಾರೀ ಕಿರಿಕಿರಿಯೂ ಸಹ ಆಗುತ್ತಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...