ಬ್ಯಾಕ್ಟೀರಿಯಲ್ ಪ್ಯಾರಾಸೈಟ್‌ಗಳ ಮೂಲಕ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನವಾಗಿಸುವ ವಿಧಾನದ ಹಿಂದಿನ ರಹಸ್ಯವನ್ನು ಬ್ರಿಟನ್‌ನ ಜಾನ್ಸ್ ಇನ್ನೆಸ್ ಕೇಂದ್ರದ ಸಂಶೋಧಕರು ಪತ್ತೆ ಮಾಡಿದ್ದಾರೆ. ನಾರ್ವಿಚ್‌ನ ಸೈನ್ಸ್‌ಬರಿ ಪ್ರಯೋಗಾಲಯ, ವಜೆನಿಂಗೆನ್ ವಿವಿ ಮತ್ತು ತಾಯ್ವಾನ್‌ನ ಅಕಾಡೆಮಿಯಾ ಸಿನಿಸಾ ಹಾಗೂ ನೆದರ್ಲೆಂಡ್ಸ್‌ನ ಸಂಶೋಧನಾ ಕೇಂದ್ರಗಳು ಈ ಪ್ರಯೋಗದಲ್ಲಿ ಕೈಜೋಡಿಸಿವೆ.
ಸಸ್ಯಗಳಲ್ಲೇ ಜೀವಿಸುವ ಪರಾವಲಂಬಿ ಜೀವಿಗಳು ಸಸ್ಯಗಳು ಉತ್ಪಾದಿಸುವ ಪೋಷಕಾಂಶಗಳು ಹಾಗೂ ಪ್ರೊಟೀನ್‌ಗಳನ್ನು ಅವಲಂಬಿಸಿರುತ್ತವೆ. ಆದರೆ ಕೆಲವೊಂದು ಪ್ರಕರಣಗಳಲ್ಲಿ ಸಸಿಗಳು ಈ ಪರಾವಲಂಬಿ ಜೀವಿಗಳ ಕಾರಣದಿಂದ ಜ಼ೊಂಬಿಗಳಾಗುತ್ತವೆ. ಒಂದು ಹಂತದಿಂದ ಸಸಿಗಳು ಕೇವಲ ಈ ಪರಾವಲಂಬಿ ಜೀವಿಗಳಿಗೆ ಎರವಾಗುತ್ತಾ, ಸಂತಾನೋತ್ಪತ್ತಿಯನ್ನೇ ನಿಲ್ಲಿಸಿಬಿಡುತ್ತವೆ.
ಈ ಮುನ್ನ ಸಸಿಗಳು ಒಮ್ಮೆಲೇ ಬೆಳವಣಿಗೆ ನಿಲ್ಲಿಸುವುದು ಏಕೆ ಎಂದು ಅರಿಯಲು ಭಾರೀ ಪ್ರಯತ್ನದಲ್ಲಿದ್ದರು. ತಮ್ಮನ್ನು ಸಲಹಲು ಮಾತ್ರವೇ ಸಸಿಗಳು ಬದುಕುವಂತೆ ಮಾಡಬಲ್ಲಷ್ಟು ನಿಷ್ಣಾತ ಪರಾವಲಂಬಿಗಳು ಇವಾಗಿವೆ.
ಎಸ್‌ಎಪಿ05 ಹೆಸರಿನ ಪ್ರೊಟೀನ್ ಉತ್ಪತ್ತಿ ಮಾಡುವ ಈ ಪ್ಯಾರಾಸೈಟ್‌ಗಳು ಸಸಿಗಳ ಅಭಿವೃದ್ಧಿಯನ್ನೇ ತಮಗೆ ಬೇಕಾದಂತೆ ನಿರ್ದೇಶಿಸಬಲ್ಲಷ್ಟು ನೊಟೋರಿಸಯಸ್ ಪೈಕಿಯ ಬ್ಯಾಕ್ಟೀರಿಯಾಗಳಾಗಿವೆ.
ಒಮ್ಮೆ ಅತಿಥಿ ಜೀವಿಯ ದೇಹದೊಳಗೆ ಪ್ರವೇಶಿಸುತ್ತಲೇ, ಈ ಸೂಕ್ಷ್ಮಜೀವಿಗಳು ಪ್ರೋಟೀನ್ ರಚನೆಗಳನ್ನು ಮುರಿದು ಸಸಿಗಳ ಬೆಳವಣಿಗೆಗೆ ಕಾರಣವಾಗುವ ಅಂಶಗಳನ್ನೇ ನಿಯಂತ್ರಣಕ್ಕೆ ತೆಗೆದುಕೊಂಡು ಕೊಂಬೆಯಂಥ ರಚನೆಗಳಾ ’ವಿಚಸ್’ ಚಿಗುರಲು ಕಾರಣವಾಗುತ್ತವೆ.