ಜಪಾನ್‌ನ ತುರ್ತು ಪ್ರತಿಕ್ರಿಯಾ ತಂಡವೊಂದಕ್ಕೆ ಭಾರೀ ಮುಜುಗರ ತರುವ ಘಟನೆಯೊಂದರಲ್ಲಿ, ಮಹಿಳೆಯೊಬ್ಬರು ಮುಳುಗುತ್ತಿದ್ದಾರೆ ಎಂದುಕೊಂಡು ರಕ್ಷಣೆಗೆ ಮುಂದಾದಾಗ ಅದು ’ಬೇರೆಯೇ’ ಆಗಿರುವ ವಿಚಾರ ತಿಳಿದುಬಂದಿದೆ.
ನೀರಿನ ಮೇಲೆ ತೇಲಾಡುತ್ತಿದ್ದ ಆಕೃತಿಯೊಂದನ್ನು ಕಂಡ ತಂಡದ ಸದಸ್ಯರಿಗೆ ಅದೊಂದು ಲೈಂಗಿಕ ಆಟಿಕೆ ಎಂದು ರಕ್ಷಣಾ ಕಾರ್ಯ ಮುಗಿದ ಬಳಿವಷ್ಟೇ ತಿಳಿದುಬಂದಿದೆ.
ʼವಿಘ್ನ ನಿವಾರಕʼನ ಅನುಗ್ರಹವಿದೆ ಈ ರಾಶಿಗೆ
ಜಪಾನ್‌ನ ಈಶಾನ್ಯದ ಹಚಿನೋಲ್‌ನಲ್ಲಿರುವ ಊರಿನಲ್ಲಿ ಈ ಘಟನೆ ಜರುಗಿದೆ. ತನಾಕಾ ನಟ್ಸುಕಿ ಎಂಬ ಯೂಟ್ಯೂಬರ್ ಒಬ್ಬರು ಈ ಘಟನೆ ನಡೆದ ವೇಳೆ ಆ ಸ್ಥಳದಲ್ಲಿದ್ದು, ’ಮುಳುಗಲಿದ್ದ ಮಹಿಳೆ’ಯನ್ನು ಮೇಲೆತ್ತುವುದನ್ನು ನೋಡಲು ಬಂದಿದ್ದ ದೊಡ್ಡ ಜನಸ್ತೋಮದಲ್ಲಿ ಒಬ್ಬರಾಗಿದ್ದರು.
ಅದೊಂದು ಬಳಸಿ ಬಿಸಾಡಿದ ರಬ್ಬರ್ ಲೈಂಗಿಕ ಆಟಿಕೆ ಎಂದು ತಿಳಿದ ಬಳಿಕ ದಾರಿಹೋಕರಿಗೆಲ್ಲಾ ಶಾಕ್ ಆಗಿದೆ.